ಯಾರಿಗೆ ತಾನೇ ತನ್ನ ಬಳಿಯೊಂದು ಕಾರ್ ಇರಬೇಕು ಅನ್ನೊ ಕನಸಿರೋಲ್ಲ…… ಅದರಲ್ಲೂ ಬುಗಾಟಿ ಚಿರೋನ್ ಅಂತಹ ಹೈಫೈ ಕಾರ್ ಇದ್ದರೆ ಸಾಕು ಅನ್ನೋ ಆಸೆಯೂ ಇರುತ್ತೆ. ಆದರೆ ಈ ಕಾರ್ ಬೆಲೆ ಕೇಳಿದ್ರೆ ಸಾಕು, ಆ ಕಾರ್ ಖರೀದಿ ಮಾಡೋದು ಕಾಮನ್ ಮ್ಯಾನ್‌ಗೆ ಹಗಲು ಕನಸಿನಂತಿರುತ್ತೆ. ಕೈಯಲ್ಲಿ ಕಾಸಿಲ್ಲದಿದ್ದರೇನು ಕನಸು ಕಾಣೋದಕ್ಕೆ ಕಾಸು ಏನು ಬೇಕಾಗಿಲ್ಲ ಅಲ್ವಾ..? ಆದ್ರೆ ವಿಯತ್ನಾಂ ಯುವಕರು ತನ್ನ ಈ ಬುಗ್ಗಾಟಿ ಚಿರೋನ್ ಕನಸನ್ನ ನನಸು ಮಾಡಿಕೊಂಡಿದ್ದೇ ರೋಚಕ ಕಥೆ.
ಅದು 3-4 ಯುವಕರ ತಂಡ. ಆ ಗುಂಪಲ್ಲಿ ಇದ್ದವರಿಗೆ ಬುಗ್ಗಾಟಿ ಚಿರೋನ್ ಕಾರ್ ಮಾಲೀಕರಾಗಬೇಕು ಅನ್ನೊ ದೊಡ್ಡ ಕನಸು. ಆ ಕನಸಿಗೆ ರೂಪ ಕೊಟ್ಟಿದ್ದು. ಅಲ್ಲೇ ಪಕ್ಕದಲ್ಲಿದ್ದ ಕೆರೆಯ ಮಣ್ಣು. ಅದೇ ಮಣ್ಣಿನಿಂದ ಹೇಗೆ ಕಾರೊಂದನ್ನ ಸೃಷ್ಟಿಸಿ ಬಿಟ್ಟರು ನೋಡಿ.
ವಿಚಾರಣೆಯಲ್ಲಿ ಬಹಿರಂಗವಾಯ್ತು PSI ಅಕ್ರಮದ ಮತ್ತೊಂದು ಮಹತ್ವದ ಮಾಹಿತಿ
ಮಣ್ಣು ,ಪ್ಲಾಸ್ಟಿಕ್ ಹಾಳೆ ಹಾಗೂ ಪೈಪ್ಗಳನ್ನ ಬಳಸಿಕೊಂಡು ಕಾರ್ ಸೃಷ್ಟಿಸೋಕೂ ಸಾಧ್ಯ ಅನ್ನೋದನ್ನ ಈ ಯುವಕರು ತೋರಿಸಿಕೊಟ್ಟಿದ್ದಾರೆ. ಮೊದಲು ಪೈಪ್ ಹಾಗೂ ಪ್ಲಾಸ್ಟಿಕ್ ಶೀಟ್ ಉಪಯೋಗಿಸಿ ಅದನ್ನ ಕಾರ್ ಆಕಾರ ಕೊಟ್ಟು ಕೊನೆಗೆ ಅದಕ್ಕೆನೇ ಮಣ್ಣನ್ನ ಮೆತ್ತಿ ಕಾರ್ ರೂಪವನ್ನ ಕೊಟ್ಟಿದ್ದಾರೆ. ಅಷ್ಟೆ ಅಲ್ಲ ಕಾರ್ ಗೆ ಬೇಕಾಗಿರೋ ಎಲ್ಲ ರೀತಿಯ ಯಂತ್ರಗಳನ್ನ ಇದಕ್ಕೆ ಅಳವಡಿಸಿದ್ದಾರೆ. ಕೊನೆಯದಾಗಿ ಫಿನಿಶಿಂಗ್ ಮಾಡಿರೋ ರೀತಿ ನೋಡಿದ್ರೆ ಇದು ಯಾವ ಕಾರ್ ಗಿಂತಲೂ ಕಡಿಮೆ ಇಲ್ಲ ಅನ್ನೊ ಹಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಕಾರ್ ವಿಡಿಯೋ ಸಖತ್ ಸೌಂಡ್ ಮಾಡ್ತಿದೆ. ಅಷ್ಟೆ ಅಲ್ಲ ಅನೇಕರಿಗೆ ಇಂತಹ ಕ್ರಿಯೇಟಿವಿಟಿ ಮಾಡಲು ಉತ್ತೇಜಿಸಿದೆ. ನೆಟ್ಟಿಗರಂತೂ ಯುವಕರ ಈ ಕಾರ್ ನೋಡಿ ಫುಲ್ ಫಿದಾ ಆಗಿ ಹೋಗಿದ್ದಾರೆ.
https://twitter.com/_figensezgin/status/1522645419712466944
https://twitter.com/AayushKrGupta/status/1523145890634289153