alex Certify ಸಹಪಾಠಿಯನ್ನು ಮನಬಂದಂತೆ ಥಳಿಸಿದ ವಿದ್ಯಾರ್ಥಿಗಳು..! ಶಾಕಿಂಗ್‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಪಾಠಿಯನ್ನು ಮನಬಂದಂತೆ ಥಳಿಸಿದ ವಿದ್ಯಾರ್ಥಿಗಳು..! ಶಾಕಿಂಗ್‌ ವಿಡಿಯೋ ವೈರಲ್

ಹೈದರಾಬಾದ್: ಅವರೆಲ್ಲಾ ಒಂದೇ ಕಾಲೇಜಿನ ವಿದ್ಯಾರ್ಥಿಗಳು. ಜೊತೆಗೆ ಓದುತ್ತಿದ್ದವರು ಸ್ನೇಹಿತರಾಗಿ ಇರೋದು ಬಿಟ್ಟು ಕಟ್ಟಾ ವೈರಿಗಳಂತೆ ವರ್ತನೆ ಮಾಡಿದ್ದಾರೆ. ಎಲ್ಲರೂ ಸೇರಿಕೊಂಡು ಒಬ್ಬ ವಿದ್ಯಾರ್ಥಿಗೆ ಥಳಿಸಿದ್ದಾರೆ. ಈ ಘಟನೆ ನಡೆದಿರೋದು ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ.

ಸಂತ್ರಸ್ತ ಮತ್ತು ಎಲ್ಲಾ ಆರೋಪಿಗಳು ಎಸ್‌.ಆರ್‌.ಕೆ.ಆರ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದರಂತೆ. ಇಲ್ಲಿನ ನಾಲ್ವರು ವಿದ್ಯಾರ್ಥಿಗಳು ಸೇರಿ ಒಬ್ಬ ವಿದ್ಯಾರ್ಥಿಯನ್ನ ಹಾಸ್ಟೆಲ್ ಕೊಠಡಿಯೊಳಗೆ ಹಾಕಿ ಥಳಿಸಿದ್ದಾರೆ. ಅಂಕಿತ್‌ ಎಂಬಾತ ಒದೆ ತಿಂದ ವಿದ್ಯಾರ್ಥಿ. ಕರುಣೆಯಿಲ್ಲದೆ ಆತನಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಅಷ್ಟೆ ಅಲ್ಲ ಇಸ್ತ್ರಿ ಪೆಟ್ಟಿಗೆಯನ್ನು ಬಳಸಿ ಹಲ್ಲೆ ಮಾಡಿದ್ದಾರೆ. ಪಿವಿಸಿ ಪೈಪ್‌ ಗಳಿಂದ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಈ ಸಂತ್ರಸ್ತ ವಿದ್ಯಾರ್ಥಿ ಅಂಕಿತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ದೇಹದ ತುಂಬಾ ಗಾಯಗಳಾಗಿವೆ. ಅವರ ಎದೆ ಮತ್ತು ಕೈಗಳ ಮೇಲೆ ತರಚಿದ ಗಾಯಗಳಿವೆ. ಹೊಡೆಯುವ ವಿಡಿಯೋ ಇದೀಗ ವೈರಲ್ ಆಗಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನು ವಿಡಿಯೋದಲ್ಲಿ ಅಂಕಿತ ಕ್ಷಮೆ ಯಾಚನೆ ಮಾಡಿರುವುದು, ಹೊಡೆಯಬೇಡಿ ಅಂತ ಅಂಗಲಾಚಿರೋದು ಗೊತ್ತಾಗ್ತಾ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...