alex Certify ಅಪಘಾತದ ಮುನ್ಸೂಚನೆ ನೀಡಿದ ಟೆಸ್ಲಾ ಆಟೋ ಪೈಲಟ್​ ಕಾರು…! ಅಚ್ಚರಿ ಹುಟ್ಟಿಸುತ್ತೆ ತಂತ್ರಜ್ಞಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತದ ಮುನ್ಸೂಚನೆ ನೀಡಿದ ಟೆಸ್ಲಾ ಆಟೋ ಪೈಲಟ್​ ಕಾರು…! ಅಚ್ಚರಿ ಹುಟ್ಟಿಸುತ್ತೆ ತಂತ್ರಜ್ಞಾನ

ಟೆಸ್ಲಾ ಕಾರುಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನದ ಮೂಲಕವೇ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಟೆಸ್ಲಾ ಕಂಪನಿಯು ಚಾಲಕನಿಲ್ಲದೇ ಸಂಚಾರ ಮಾಡಬಲ್ಲ ಆಟೋ ಪೈಲಟ್​ ಅಥವಾ ರಿಮೋಟ್​ ಡ್ರೈವಿಂಗ್​ ಕಾರುಗಳನ್ನೂ ತಯಾರಿಸಿದೆ.

ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ಈ ಆಟೋ ಪೈಲಟ್​ ಕಾರುಗಳು ಟ್ರೆಂಡಿಂಗ್​ನಲ್ಲಿ ಇವೆ. ಕಾರಿನ ಚಾಲಕರು ಹಿಂಭಾಗದ ಸೀಟಿನಲ್ಲಿ ಕೂತು ಕಾರನ್ನ ಕಂಟ್ರೋಲ್​ ಮಾಡುತ್ತಿರುವ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಾ ಇರುತ್ತವೆ.

ಟೆಸ್ಲಾ ಕಾರುಗಳು ಚಾಲಕನಿಲ್ಲದೇ ಸಂಚರಿಸುತ್ತವಾದರೂ ಕಾರನ್ನ ನಿಯಂತ್ರಣ ಮಾಡೋಕೆ ಒಬ್ಬ ವ್ಯಕ್ತಿ ಕಾರಿನಲ್ಲಿ ಇರಲೇಬೇಕು. ಈ ಬಗ್ಗೆ ಟೆಸ್ಲಾ ಕಂಪನಿ ಕೂಡ ಮಾಹಿತಿ ನೀಡಿದ್ದು ಯಾರಾದರೂ ವ್ಯಕ್ತಿ ಕಾರಿನೊಳಕ್ಕೆ ಇದ್ದಾಗ ಮಾತ್ರ ಆಟೋ ಪೈಲಟ್​ ಆಯ್ಕೆ ಬಳಕೆ ಮಾಡಬೇಕು ಎಂದು ಹೇಳಿದೆ.

ಚಾಲಕನಿಲ್ಲದ ಕಾರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಸೋಶಿಯಲ್​ ಮೀಡಿಯಾದಲ್ಲಿ ಬಹುದಿನಗಳ ಹಿಂದೆಯಿಂದಲೇ ಹುಟ್ಟಿಕೊಂಡಿದೆ. ಆದರೆ ಟ್ವಿಟರ್​ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಟೆಸ್ಲಾ ಕಾರಿನ ಸುರಕ್ಷತೆಯ ಬಗ್ಗೆ ಆಡಿಕೊಂಡವರ ಬಾಯಿ ಮುಚ್ಚಿಸುವಂತಿದೆ.

ವಿಡಿಯೋದ ಸಣ್ಣ ತುಣುಕೊಂದರಲ್ಲಿ ಆಟೋಪೈಲಟ್​ ಕಾರು ಅಪಘಾತದ ಮುನ್ಸೂಚನೆಯನ್ನ ಕಾರಿನಲ್ಲಿದ್ದ ವ್ಯಕ್ತಿಗೆ ನೀಡಿದೆ. ಈ ವಿಡಿಯೋವನ್ನ 2016ರಲ್ಲೇ ಚಿತ್ರೀಕರಿಸಲಾಗಿದ್ದು ಈಗ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಆಟೋ ಪೈಲಟ್​ ಕಾರು ಮುಂದೆ ಅಪಘಾತ ಕಾದಿದೆ ಎಂಬುದನ್ನ ಅರಿತು ರಸ್ತೆ ಮಧ್ಯದಲ್ಲಿಯೇ ನಿಂತುಕೊಂಡಿದೆ. ಟೆಸ್ಲಾ ಕಾರುಗಳಿಗೆ ಅಪಘಾತದ ಮುನ್ಸೂಚನೆ ಅರಿಯಬಲ್ಲ ಸಾಮರ್ಥ್ಯ ಇರೋದ್ರಿಂದ ಇದು ಸಾಧ್ಯವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...