ಟೆಸ್ಲಾ ಕಾರುಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನದ ಮೂಲಕವೇ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಟೆಸ್ಲಾ ಕಂಪನಿಯು ಚಾಲಕನಿಲ್ಲದೇ ಸಂಚಾರ ಮಾಡಬಲ್ಲ ಆಟೋ ಪೈಲಟ್ ಅಥವಾ ರಿಮೋಟ್ ಡ್ರೈವಿಂಗ್ ಕಾರುಗಳನ್ನೂ ತಯಾರಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ಆಟೋ ಪೈಲಟ್ ಕಾರುಗಳು ಟ್ರೆಂಡಿಂಗ್ನಲ್ಲಿ ಇವೆ. ಕಾರಿನ ಚಾಲಕರು ಹಿಂಭಾಗದ ಸೀಟಿನಲ್ಲಿ ಕೂತು ಕಾರನ್ನ ಕಂಟ್ರೋಲ್ ಮಾಡುತ್ತಿರುವ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಾ ಇರುತ್ತವೆ.
ಟೆಸ್ಲಾ ಕಾರುಗಳು ಚಾಲಕನಿಲ್ಲದೇ ಸಂಚರಿಸುತ್ತವಾದರೂ ಕಾರನ್ನ ನಿಯಂತ್ರಣ ಮಾಡೋಕೆ ಒಬ್ಬ ವ್ಯಕ್ತಿ ಕಾರಿನಲ್ಲಿ ಇರಲೇಬೇಕು. ಈ ಬಗ್ಗೆ ಟೆಸ್ಲಾ ಕಂಪನಿ ಕೂಡ ಮಾಹಿತಿ ನೀಡಿದ್ದು ಯಾರಾದರೂ ವ್ಯಕ್ತಿ ಕಾರಿನೊಳಕ್ಕೆ ಇದ್ದಾಗ ಮಾತ್ರ ಆಟೋ ಪೈಲಟ್ ಆಯ್ಕೆ ಬಳಕೆ ಮಾಡಬೇಕು ಎಂದು ಹೇಳಿದೆ.
ಚಾಲಕನಿಲ್ಲದ ಕಾರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಬಹುದಿನಗಳ ಹಿಂದೆಯಿಂದಲೇ ಹುಟ್ಟಿಕೊಂಡಿದೆ. ಆದರೆ ಟ್ವಿಟರ್ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಟೆಸ್ಲಾ ಕಾರಿನ ಸುರಕ್ಷತೆಯ ಬಗ್ಗೆ ಆಡಿಕೊಂಡವರ ಬಾಯಿ ಮುಚ್ಚಿಸುವಂತಿದೆ.
ವಿಡಿಯೋದ ಸಣ್ಣ ತುಣುಕೊಂದರಲ್ಲಿ ಆಟೋಪೈಲಟ್ ಕಾರು ಅಪಘಾತದ ಮುನ್ಸೂಚನೆಯನ್ನ ಕಾರಿನಲ್ಲಿದ್ದ ವ್ಯಕ್ತಿಗೆ ನೀಡಿದೆ. ಈ ವಿಡಿಯೋವನ್ನ 2016ರಲ್ಲೇ ಚಿತ್ರೀಕರಿಸಲಾಗಿದ್ದು ಈಗ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಆಟೋ ಪೈಲಟ್ ಕಾರು ಮುಂದೆ ಅಪಘಾತ ಕಾದಿದೆ ಎಂಬುದನ್ನ ಅರಿತು ರಸ್ತೆ ಮಧ್ಯದಲ್ಲಿಯೇ ನಿಂತುಕೊಂಡಿದೆ. ಟೆಸ್ಲಾ ಕಾರುಗಳಿಗೆ ಅಪಘಾತದ ಮುನ್ಸೂಚನೆ ಅರಿಯಬಲ್ಲ ಸಾಮರ್ಥ್ಯ ಇರೋದ್ರಿಂದ ಇದು ಸಾಧ್ಯವಾಗಿದೆ.