alex Certify Video | ಚಲಿಸುತ್ತಿದ್ದ ಕಾರಿನ ಮೇಲೆ ಹಠಾತ್​ ದಾಳಿ; ವಾಹನ ಸ್ಫೋಟಕ್ಕೆ ಮೂವರು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಚಲಿಸುತ್ತಿದ್ದ ಕಾರಿನ ಮೇಲೆ ಹಠಾತ್​ ದಾಳಿ; ವಾಹನ ಸ್ಫೋಟಕ್ಕೆ ಮೂವರು ಬಲಿ

ಗಾಜಾ ಪಟ್ಟಿಯ ಮುಖ್ಯ ಹೆದ್ದಾರಿಯಲ್ಲಿ ಇಸ್ರೇಲಿ ಟ್ಯಾಂಕ್​​ನಿಂದ ಕಾರನ್ನು ಸ್ಪೋಟಗೊಳಿಸಲಾಗಿದ್ದು, ಈ ಭಯಾನಕ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಘಟನೆ ನಡೆದ ಸ್ಥಳ, ದಿನಾಂಕ ಹಾಗೂ ಸಮಯದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಯುಸೂಫ್​ ಅಲ್​ ಸೈಫಿ ಎಂಬ ಪ್ಯಾಲಸ್ಟೈನ್​ ಪತ್ರಕರ್ತ ರೆಕಾರ್ಡ್ ಮಾಡಿರುವ ವಿಡಿಯೋ ಇದಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 41 ಸೆಕೆಂಡುಗಳ ವಿಡಿಯೋದಲ್ಲಿ ಕಾರನ್ನು ಗುರಿಯಾಗಿಟ್ಟು ನಡೆದ ಸ್ಪೋಟವನ್ನು ಕಾಣಬಹುದಾಗಿದೆ.

ರಸ್ತೆಗೆ ಅಡ್ಡಲಾಗಿ ಇದ್ದ ತಾತ್ಕಾಲಿಕ ತಡೆಗೋಡೆ ಸಮೀಪ ಕಾರು ಬಂದಿರೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ. ನಿಲುಗಡೆಗೊಳ್ಳಬೇಕಿದ್ದ ಕಾರು ಸೀದಾ ಹಿಮ್ಮುಖವಾಗಿ ಚಲಿಸಲು ಆರಂಭಿಸುತ್ತದೆ. ಆದರೆ ಅಲ್ಲೇ ಇದ್ದ ಟ್ಯಾಂಕ್​ನಿಂದ ಕಾರಿನ ಮೇಲೆ ಗುಂಡು ಹಾರಿಸುತ್ತಿರೋದನ್ನು ಕಾಣಬಹುದಾಗಿದೆ. ಇದರಿಂದ ಕಾರು ಹಠಾತ್​ ಸ್ಫೋಟಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...