ಟರ್ಕಿಯಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಬಲವಾದ ಕಂಪನದಲ್ಲಿ ಅನೇಕ ಕಟ್ಟಡಗಳು ನಾಶವಾಗಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಇದರ ಭಯಾನಕ ಚಿತ್ರಣ ವೈರಲ್ ಆಗಿದೆ.
ಸೈಪ್ರಸ್, ಟರ್ಕಿ, ಗ್ರೀಸ್, ಜೋರ್ಡಾನ್, ಲೆಬನಾನ್, ಸಿರಿಯಾ, ಯುಕೆ, ಇರಾಕ್ ಮತ್ತು ಜಾರ್ಜಿಯಾ ಸೇರಿದಂತೆ ಇತರ ಕೆಲವು ದೇಶಗಳಲ್ಲಿ ಭೂಕಂಪದ ನಂತರದ ಕಂಪನವನ್ನು ಅನುಭವಿಸಲಾಯಿತು. ಕಟ್ಟಡಗಳು ಕುಸಿಯುತ್ತಿರುವುದನ್ನು, ಮಸೀದಿಗಳು ಬೀಳುತ್ತಿರುವುದು, ಸೂಪರ್ ಮಾರ್ಕೆಟ್ಗಳು ನಾಶವಾದುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಟರ್ಕಿಯ ದಿಯಾರ್‌ಬಕಿರ್‌ನಿಂದ ಸಂಭವಿಸಿದ ಭೂಕಂಪದ ವಿಡಿಯೋವು ಕಂಪನದ ನಂತರ ಕಟ್ಟಡವು ಕುಸಿಯುತ್ತಿರುವುದನ್ನು ತೋರಿಸುತ್ತದೆ. ಎಂಟು ಸೆಕೆಂಡುಗಳ ವಿಡಿಯೋದಲ್ಲಿ ಕಟ್ಟಡವು ಕಾಂಕ್ರೀಟ್ ಮತ್ತು ಧೂಳಿನ ರಾಶಿಗೆ ಕುಸಿದಾಗ ಗುಡುಗು ಸಿಡಿಲಿನ ನಿಖರವಾದ ಕ್ಷಣವನ್ನು ಸೆರೆಹಿಡಿಯುತ್ತದೆ.