ಹಕ್ಕಿಗಳ ಕಲರವ ಮನಸ್ಸಿಗೆ ಮುದ ನೀಡುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಸಿಡ್ನಿಯ ಮೃಗಾಲಯದಲ್ಲಿರುವ ಲೈರ್ಬರ್ಡ್ ಎಂಬ ಹಕ್ಕಿಯು ಕೂಗುವ ಸದ್ದನ್ನು ಕೇಳಿದ್ರೆ ನೀವೊಮ್ಮೆ ಬೆಕ್ಕಸ ಬೆರಗಾಗೋದು ಗ್ಯಾರಂಟಿ. ಏಕೆಂದರೆ ಈ ಹಕ್ಕಿಯು ಥೇಟ್ ಮಗುವಿನ ಅಳುವಿನಂತೆಯೇ ಸೌಂಡ್ನ್ನು ಹೊರಡಿಸುತ್ತವೆ.
ಎಕೋ ಎಂಬ ಹೆಸರಿನ ಈ ಹಕ್ಕಿಯು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಈ ಎಲ್ಲಾ ಚಾಕಚಕ್ಯತೆಯನ್ನು ಕಲಿತಿದೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿಡ್ನಿಯಲ್ಲಿರುವ ಟರೊಂಗಾ ಮೃಗಾಲಯದಲ್ಲಿರುವ 7 ವರ್ಷದ ಗಂಡು ಲೈರ್ ಹಕ್ಕಿಯು ವಿಶಿಷ್ಟ ಧ್ವನಿಯನ್ನು ಹೊರಹಾಕುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.
ಇವು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ಈ ಧ್ವನಿಯನ್ನು ಕಲಿತಿರಬಹುದು ಎಂದು ಮೃಗಾಲಯದ ಪಕ್ಷಿ ಘಟಕದ ಮೇಲ್ವಿಚಾರಕ ಲಿಯಾನ್ ಗೊಲೆಬಿಯೋವ್ಸ್ಕಿ ಹೇಳಿದ್ದಾರೆ. ಮಗುವಿನ ಅಳುವಿನ ಶಬ್ದದ ಜೊತೆಗೆ ಇದು ಫೈರ್ ಅಲರಾಂ ಸೌಂಡ್ನ್ನೂ ಅನುಕರಿಸುವ ಸಾಮರ್ಥ್ಯ ಹೊಂದಿದೆ.