alex Certify ಕೊತ ಕೊತ ಕುದಿಯುತ್ತಿರುವ ನೀರಿನ ಮಧ್ಯೆ ಕುಳಿತ ಬಾಲಕ..! ಸೋಶಿಯಲ್​ ಮಿಡಿಯಾದಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊತ ಕೊತ ಕುದಿಯುತ್ತಿರುವ ನೀರಿನ ಮಧ್ಯೆ ಕುಳಿತ ಬಾಲಕ..! ಸೋಶಿಯಲ್​ ಮಿಡಿಯಾದಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ

ಕೊತಕೊತ ಕುದಿಯುತ್ತಿರುವ ನೀರಿನ ಬಾಣಲೆಯಲ್ಲಿ ಬಾಲಕನೊಬ್ಬ ಆರಾಮಾಗಿ ಕುಳಿತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ವೈರಲ್​ ಆದ ಬಳಿಕ ನೆಟ್ಟಿಗರಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿದೆ.

30 ಸೆಕೆಂಡ್​ಗಳ ವಿಡಿಯೋದಲ್ಲಿ ಒಲೆಯ ಮೇಲೆ ಇಡಲಾಗಿದ್ದ ಬಾಣಲೆಯಲ್ಲಿ ನೀರು ಕೊತ ಕೊತ ಎಂದು ಕುದಿಯುತ್ತಿದ್ದರೆ ಬಾಲಕ ಬಿಸಿಯೇ ತಾಕದ ರೀತಿಯಲ್ಲಿ ಬಾಣಲೆಯೊಳಗೆ ಕೂತಿದ್ದಾನೆ. ಈ ಸ್ಥಳದಲ್ಲಿ ಸಾಕಷ್ಟು ಜನ ಸೇರಿದ್ದು, ಮೊಬೈಲ್​ ಕ್ಯಾಮರಾಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ತಿರೋದನ್ನು ಕಾಣಬಹುದಾಗಿದೆ.

ಟ್ವಿಟರ್​ನಲ್ಲಿ ಸಂದೀಪ್​​ ಬಿಶ್ವತ್​ ಎಂಬವರು ಈ ವಿಡಿಯೋ ಶೇರ್​ ಮಾಡಿದ್ದು ಇದೇ 2021ರ ಭಾರತ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ 1.3 ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸಿದೆ. ಆದರೆ ಅನೇಕರು ಇದೊಂದು ಫೇಕ್​ ವಿಡಿಯೋ ಎಂದು ಹೇಳ್ತಿದ್ದಾರೆ.

ದೊಡ್ಡ ಬಾಣಲೆಯೊಳಗೆ ನೀರಿನ ಪಂಪ್​ ಇಟ್ಟು ನೀರು ಕುದಿಯುತ್ತಿದೆ ಎಂಬಂತೆ ಬಿಂಬಿಸಲಾಗಿದೆ. ನೀರು ನಿಜವಾಗಿಯೂ ಕುದಿಯುತ್ತಿದ್ದರೆ ಬಾಲಕನ ಸುತ್ತ ಇರುವ ಹೂವುಗಳು ಏಕೆ ಚಲಿಸುತ್ತಿಲ್ಲ ಅಥವಾ ಕುದಿಯುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.

— Sandeep Bisht (@iSandeepBisht) September 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...