ಕೊತಕೊತ ಕುದಿಯುತ್ತಿರುವ ನೀರಿನ ಬಾಣಲೆಯಲ್ಲಿ ಬಾಲಕನೊಬ್ಬ ಆರಾಮಾಗಿ ಕುಳಿತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿದೆ.
30 ಸೆಕೆಂಡ್ಗಳ ವಿಡಿಯೋದಲ್ಲಿ ಒಲೆಯ ಮೇಲೆ ಇಡಲಾಗಿದ್ದ ಬಾಣಲೆಯಲ್ಲಿ ನೀರು ಕೊತ ಕೊತ ಎಂದು ಕುದಿಯುತ್ತಿದ್ದರೆ ಬಾಲಕ ಬಿಸಿಯೇ ತಾಕದ ರೀತಿಯಲ್ಲಿ ಬಾಣಲೆಯೊಳಗೆ ಕೂತಿದ್ದಾನೆ. ಈ ಸ್ಥಳದಲ್ಲಿ ಸಾಕಷ್ಟು ಜನ ಸೇರಿದ್ದು, ಮೊಬೈಲ್ ಕ್ಯಾಮರಾಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ತಿರೋದನ್ನು ಕಾಣಬಹುದಾಗಿದೆ.
ಟ್ವಿಟರ್ನಲ್ಲಿ ಸಂದೀಪ್ ಬಿಶ್ವತ್ ಎಂಬವರು ಈ ವಿಡಿಯೋ ಶೇರ್ ಮಾಡಿದ್ದು ಇದೇ 2021ರ ಭಾರತ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ 1.3 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸಿದೆ. ಆದರೆ ಅನೇಕರು ಇದೊಂದು ಫೇಕ್ ವಿಡಿಯೋ ಎಂದು ಹೇಳ್ತಿದ್ದಾರೆ.
ದೊಡ್ಡ ಬಾಣಲೆಯೊಳಗೆ ನೀರಿನ ಪಂಪ್ ಇಟ್ಟು ನೀರು ಕುದಿಯುತ್ತಿದೆ ಎಂಬಂತೆ ಬಿಂಬಿಸಲಾಗಿದೆ. ನೀರು ನಿಜವಾಗಿಯೂ ಕುದಿಯುತ್ತಿದ್ದರೆ ಬಾಲಕನ ಸುತ್ತ ಇರುವ ಹೂವುಗಳು ಏಕೆ ಚಲಿಸುತ್ತಿಲ್ಲ ಅಥವಾ ಕುದಿಯುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.