ನವದೆಹಲಿ: ರೈಲು ಪ್ರಯಾಣಗಳು ಕೆಲವು ಆರೋಗ್ಯಕರ ಅನುಭವಗಳಿಗಿಂತ ಕಡಿಮೆಯಿಲ್ಲ. ಆದರೆ ಓ ಮೈ ಗಾಡ್ ಎನ್ನುವ ವಿಷಯ ಇಲ್ಲಿದೆ. ಅದೇನೆಂದರೆ ಇಲ್ಲೊಂದು ಭಾರತೀಯ ರೈಲಿನಲ್ಲಿ ಒಂದು ಟಿಕೆಟ್ಗೆ ಸುಮಾರು 20 ಲಕ್ಷ ರೂಪಾಯಿಗಳನ್ನು ಪಾವತಿಸಬೇಕು!
ಇದೇನಿದು ಜೋಕಾ ಎಂದು ಕೇಳಬೇಡಿ. ಸಾಮಾನ್ಯವಾಗಿ ಜನರು ರೈಲುಗಳಿಗೆ ಹೋಗುವುದೇ ಕಡಿಮೆ ಖರ್ಚು ಎಂದು. ಹಾಗೆಂದು ದುಬಾರಿ ಕಂಪಾರ್ಟ್ಮೆಂಟ್ಗೂ ವಿಐಪಿಗಳು ಹೋಗುತ್ತಾರೆ. ಆದರೆ 19,90,800 ರೂಪಾಯಿಯ ಟಿಕೆಟ್ ಎಂದರೆ ಹೌಹಾರುವುದು ಗ್ಯಾರಂಟಿ.
ಆದರೆ ಇಂಥದ್ದೊಂದು ಕಂಪಾರ್ಟ್ಮೆಂಟ್ ಇರುವುದು ಮಹಾರಾಜಾ ಎಕ್ಸ್ಪ್ರೆಸ್ನಲ್ಲಿ. ರಾಜಮನೆತನದ ಒಳಾಂಗಣ ಇರುವ ಕಂಪಾರ್ಟ್ಮೆಂಟ್ ಇದಾಗಿದೆ.
ಐಷಾರಾಮಿ ಬಂಗಲೆಯಲ್ಲಿ ಇರುವ ಎಲ್ಲಾ ವ್ಯವಸ್ಥೆಗಳೂ ಈ ಕಂಪಾರ್ಟ್ಮೆಂಟ್ನಲ್ಲಿ ಇದೆ. 2010ರಿಂದ ಈ ರೈಲು ತಿರುಗಾಡುತ್ತಿದೆ.
ಸಾಮಾಜಿಕ ಮಾಧ್ಯಮ ಬ್ಲಾಗರ್ ಕುಶಾಗ್ರಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ‘ನವರತ್ನ’ ಎಂಬ ರಾಷ್ಟ್ರಪತಿ ಸೂಟ್‌ಗೆ ಸುಮಾರು 19,90,800 ರೂ. ಜೊತೆಗೆ ಜಿಎಸ್‌ಟಿ ವೆಚ್ಚವಾಗುತ್ತದೆ.