ಮುಂಬೈ ಜನರಿಗೆ ರೈಲುಗಳು ಒಂದು ರೀತಿಯಲ್ಲಿ ಜೀವನಾಡಿ ಇದ್ದಂತೆ. ಕೆಲವೊಂದು ಸಂದರ್ಭದಲ್ಲಂತೂ ರೈಲ್ವೆ ನಿಲ್ದಾಣಗಳಲ್ಲಿ ಯಾವ ರೀತಿ ಜನಸಂದಣಿ ಇರುತ್ತೆ ಅಂದ್ರೆ ಅದನ್ನ ಊಹಿಸೋಕೂ ಸಾಧ್ಯವಿಲ್ಲ. ಇದೇ ಮಾದರಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ.
ಎಲ್ಲಾ ಸುರಕ್ಷತಾ ಕಾಳಜಿಯನ್ನು ಮೂಲೆಗೆ ತಳ್ಳಿ ಚಲಿಸುತ್ತಿದ್ದ ಮುಂಬೈ ಟ್ರೈನ್ ಹತ್ತಲು ಮಹಿಳೆಯರು ಮುನ್ನುಗ್ಗುತ್ತಿರೋ ವಿಡಿಯೋ ಸಖತ್ ವೈರಲ್ ಆಗಿದೆ. ಅಂದಹಾಗೆ ಮುಂಬೈನಲ್ಲಿ ಇದು ದಿನನಿತ್ಯದ ಕತೆಯಾಗಿದ್ದರೂ ಸಹ ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈಗ ಎಕ್ಸ್ ಎಂದು ಬದಲಾಗಿರುವ ಟ್ವಿಟರ್ ಆ್ಯಪ್ನಲ್ಲಿ ಅಕ್ಷಯ್ ಎಂಬವರು ಈ ವಿಡಿಯೋವನ್ನು ಶೇರ್ ಮಾಡಿದ್ದು ಲಕ್ಷಗಟ್ಟಲೇ ವೀವ್ಸ್ ಸಂಪಾದಿಸಿದೆ. ಈ ವಿಡಿಯೋದಲ್ಲಿ ಚಲಿಸುತ್ತಿರುವ ರೈಲು ಹತ್ತಲು ಮಹಿಳೆಯರು ಯತ್ನಿಸುತ್ತಿರೋದನ್ನ ಕಾಣಬಹುದಾಗಿದೆ.
ನಿಮಗೆ ಈ ದೃಶ್ಯಗಳನ್ನ ನೋಡಿ ಆಶ್ಚರ್ಯ, ಭಯ ಎಲ್ಲವೂ ಆಗಬಹುದು. ಆದರೆ ಮುಂಬೈನಲ್ಲಿ ಶ್ರೀಮಂತರು ಆರಾಮದಾಯಕವಾಗಿ ಸೌತ್ ಮುಂಬೈನಲ್ಲಿ ವಾಸವಿದ್ದಾರೆ. ಆದರೆ ಸಾಮಾನ್ಯ ವರ್ಗದ ಮುಂಬೈಕರ್ಗಳ ಜೀವನ ಇದೇ. ಇವರ ಬಳಿ ನೀವು ಉತ್ತಮ ಮೂಲಸೌಕರ್ಯಗಳ ಬಗ್ಗೆ ಕೇಳಬೇಡಿ ಅಂತಾ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ದೇಶದ ಆರ್ಥಿಕತೆಗೆ ಮುಂಬೈ ಬಹುದೊಡ್ಡ ಕೊಡುಗೆ ನೀಡಿದೆ. ಆದರೆ ಮೂಲಸೌಕರ್ಯಗಳ ವಿಚಾರದಲ್ಲಿ ಮುಂಬೈ ಅದ್ಯಾವಾಗ ಪ್ರಗತಿ ಕಾಣುತ್ತೋ ಅಂತಾ ಅನೇಕರು ಕಮೆಂಟ್ನಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.