alex Certify ಶ್ರೀರಾಮನ ಭಾವಚಿತ್ರಕ್ಕೆ ಅಪಮಾನ ಮಾಡಿದಳೇ ಈ ಮಹಿಳೆ ? ಸ್ಪಷ್ಟನೆ ಕೊಟ್ಟ ಮಹಾರಾಷ್ಟ್ರ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀರಾಮನ ಭಾವಚಿತ್ರಕ್ಕೆ ಅಪಮಾನ ಮಾಡಿದಳೇ ಈ ಮಹಿಳೆ ? ಸ್ಪಷ್ಟನೆ ಕೊಟ್ಟ ಮಹಾರಾಷ್ಟ್ರ ಪೊಲೀಸ್

ಶ್ರೀರಾಮನ ಪೋಸ್ಟರ್‌ ಒಂದಕ್ಕೆ ಹಾನಿ ಮಾಡುತ್ತಿರುವ ಮಹಿಳೆಯೊಬ್ಬರ ವಿಡಿಯೋವೊಂದು ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದಲ್ಲಿ (ಔರಂಗಾಬಾದ್‌) ರೆಕಾರ್ಡ್ ಆಗಿದೆ.

ಈ ಮಹಿಳೆ ಮುಸ್ಲಿಂ ಕೋಮಿಗೆ ಸೇರಿವಳಾಗಿದ್ದಾಳೆ ಎಂಬ ವದಂತಿಗಳು ವಿಡಿಯೋ ತುಣುಕಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಈ ಮಹಿಳೆ ಹಿಂದೂ ಆಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣಾ ಸಿಬ್ಬಂದಿ ಕಂಡು ಕೊಂಡಿದ್ದು ವದಂತಿಗೆ ತೆರೆ ಎಳೆದಿದ್ದಾರೆ. ಅಲ್ಲದೇ ಆಕೆ ಮಾನಸಿಕವಾಗಿ ಅಸ್ವಸ್ಥಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಸುದರ್ಶನ ನ್ಯೂಸ್ ಹೆಸರಿನ ವಾಹಿನಿಯೊಂದು ಈ ವಿಡಿಯೋ ಪೋಸ್ಟ್ ಮಾಡಿದ್ದು, “ಈ ಮಟ್ಟದಲ್ಲಿ ವಿಷ ತುಂಬಿಕೊಂಡಿರುವುದಾದರೂ ಎಲ್ಲಿಂದ ? ಬುರ್ಖಾಧಾರಿ ಮಹಿಳೆ ಪ್ರಭು ಶ್ರೀರಾಮನನ್ನು ದ್ವೇಷಿಸುವುದೇಕೆ ? ರಸ್ತೆಯಲ್ಲಿ ಸ್ಕೂಟಿಯನ್ನು ಪಾರ್ಕ್ ಮಾಡಿ ಶ್ರೀರಾಮನ ಚಿತ್ರದ ಮೇಲೆ ಮೊಟ್ಟೆ ಎಸೆದಿದ್ದಾಳೆ” ಎಂದು ತಿಳಿಸಿತ್ತು.

ಸೂಕ್ತ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಪೊಲೀಸರಿಂದಾಗಿ ಕೋಮು ವೈಷಮ್ಯ ಹಬ್ಬುವ ಸಾಧ್ಯತೆ ತಪ್ಪಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...