ಶ್ರೀರಾಮನ ಪೋಸ್ಟರ್ ಒಂದಕ್ಕೆ ಹಾನಿ ಮಾಡುತ್ತಿರುವ ಮಹಿಳೆಯೊಬ್ಬರ ವಿಡಿಯೋವೊಂದು ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದಲ್ಲಿ (ಔರಂಗಾಬಾದ್) ರೆಕಾರ್ಡ್ ಆಗಿದೆ.
ಈ ಮಹಿಳೆ ಮುಸ್ಲಿಂ ಕೋಮಿಗೆ ಸೇರಿವಳಾಗಿದ್ದಾಳೆ ಎಂಬ ವದಂತಿಗಳು ವಿಡಿಯೋ ತುಣುಕಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಈ ಮಹಿಳೆ ಹಿಂದೂ ಆಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣಾ ಸಿಬ್ಬಂದಿ ಕಂಡು ಕೊಂಡಿದ್ದು ವದಂತಿಗೆ ತೆರೆ ಎಳೆದಿದ್ದಾರೆ. ಅಲ್ಲದೇ ಆಕೆ ಮಾನಸಿಕವಾಗಿ ಅಸ್ವಸ್ಥಗೊಂಡಿರಬಹುದು ಎಂದು ಶಂಕಿಸಲಾಗಿದೆ.
ಸುದರ್ಶನ ನ್ಯೂಸ್ ಹೆಸರಿನ ವಾಹಿನಿಯೊಂದು ಈ ವಿಡಿಯೋ ಪೋಸ್ಟ್ ಮಾಡಿದ್ದು, “ಈ ಮಟ್ಟದಲ್ಲಿ ವಿಷ ತುಂಬಿಕೊಂಡಿರುವುದಾದರೂ ಎಲ್ಲಿಂದ ? ಬುರ್ಖಾಧಾರಿ ಮಹಿಳೆ ಪ್ರಭು ಶ್ರೀರಾಮನನ್ನು ದ್ವೇಷಿಸುವುದೇಕೆ ? ರಸ್ತೆಯಲ್ಲಿ ಸ್ಕೂಟಿಯನ್ನು ಪಾರ್ಕ್ ಮಾಡಿ ಶ್ರೀರಾಮನ ಚಿತ್ರದ ಮೇಲೆ ಮೊಟ್ಟೆ ಎಸೆದಿದ್ದಾಳೆ” ಎಂದು ತಿಳಿಸಿತ್ತು.
ಸೂಕ್ತ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಪೊಲೀಸರಿಂದಾಗಿ ಕೋಮು ವೈಷಮ್ಯ ಹಬ್ಬುವ ಸಾಧ್ಯತೆ ತಪ್ಪಿದೆ.
https://twitter.com/SudarshanNewsTV/status/1659882837632491520?ref_src=twsrc%5Etfw%7Ctwcamp%5Etweetembed%7Ctwterm%5E1659882837632491520%7Ctwgr%5Ed1bcd57ffbfd0a570dd7a52f3b0f960832f85dd3%7Ctwcon%5Es1_&ref_url=https%3A%2F%2Fwww.boomlive.in%2Ffact-check%2Fpolitics%2Fmuslim-burqa-woman-throw-eggs-shree-ram-poster-chhatrapati-shambhajinagar-maharashtra-video-viral-fact-check-22031