alex Certify Video | ಏಕಾಏಕಿ ಎದುರಿಗೆ ಬಂದ್ಲು ಭೂತದಂತೆ ವೇಷ ಧರಿಸಿದ್ದ ಯುವತಿ; ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಏಕಾಏಕಿ ಎದುರಿಗೆ ಬಂದ್ಲು ಭೂತದಂತೆ ವೇಷ ಧರಿಸಿದ್ದ ಯುವತಿ; ಬೆಚ್ಚಿಬಿದ್ದ ಜನ

ಬಾಲಿವುಡ್ ಚಲನಚಿತ್ರ ‘ಭೂಲ್ ಭುಲೈಯಾ’ ದ ‘ಮಂಜುಲಿಕಾ’ ಭೂತ ನೋಡಿ ಬೆಚ್ಚಿಬಿದ್ದವರು ಅದೆಷ್ಟೋ ಮಂದಿ. ಇದೀಗ ರಾಜಸ್ಥಾನದಲ್ಲಿ ಅದೇ ವೇಷ ತೊಟ್ಟ ಹುಡುಗಿಯೊಬ್ಬಳು ಬಿಳಿ ಬಟ್ಟೆಯಲ್ಲಿ ಮುಚ್ಚಿಕೊಂಡು ಜನರನ್ನು ಹೆದರಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್​ ಆಗಿದೆ.

ಯುವತಿ ಉದ್ದನೆಯ ಕೂದಲಿನ ವಿಗ್ ಮತ್ತು ದೇಹಕ್ಕೆ ಬಿಳಿ ಹಾಳೆಯನ್ನು ಸುತ್ತಿಕೊಂಡಿರುವುದನ್ನು ವಿಡಿಯೋ ತೋರಿಸುತ್ತದೆ. ರಾಜಸ್ಥಾನದ ಭರತ್‌ಪುರದ ಹವೇಲಿಯೊಂದರಲ್ಲಿ ಯುವತಿ ಸುತ್ತಾಡುತ್ತಾ ಜನರನ್ನು ಹೆದರಿಸಲು ಯತ್ನಿಸಿದ್ದಾಳೆ. ಹುಡುಗಿ ಎಲ್ಲಿಂದಲೋ ಜಿಗಿಯುತ್ತಿರುವುದನ್ನು ಕಂಡು ಜನರು ಜೋರಾಗಿ ಕಿರುಚುವುದನ್ನು ಕ್ಲಿಪ್ ತೋರಿಸುತ್ತದೆ.

ಈ ವಿಡಿಯೋ ಟ್ವಿಟರ್‌ನಲ್ಲಿ 36,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಜನರು ತಮ್ಮದೇ ಆದ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ನಿಜಕ್ಕೂ ಇದು ಆಘಾತಕಾರಿಯಾಗಿದೆ. ಮಕ್ಕಳು ನೋಡಿಕೊಂಡರೆ ಹೆದರಿಕೊಳ್ಳುವುದು ಖಂಡಿತ. ಇಂಥ ದೃಶ್ಯಗಳನ್ನು ಪ್ರಸಾರ ಮಾಡುವುದು ತಪ್ಪು ಎಂದು ಹಲವರು ಕಮೆಂಟ್​ನಲ್ಲಿ ಹೇಳಿದ್ದಾರೆ. ಇನ್ನು ಕೆಲವರು ಇದು ಬಾಲಿವುಡ್​ ಹೆಣ್ಣು ಭೂತ, ಅಬ್ಬಬ್ಬಾ! ನಿಜವಾಗಿಯೂ ಭೂತ ಈ ಬಾಲಿವುಡ್​ನಂತೆ ಇರುತ್ತದೆಯೇ ಎಂದು ತಮಾಷೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...