ಯುಕೆಯಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಬೋರಿಸ್ ಜಾನ್ಸನ್ ಅವರು ಕನ್ಸರ್ವೇಟಿವ್ ನಾಯಕತ್ವವನ್ನು ತೊರೆದ ವಾರಗಳ ನಂತರ ಮುಂದಿನ ಬ್ರಿಟಿಷ್ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವವರೆಗೆ ಅವರು ಅಧಿಕಾರದಲ್ಲಿ ಇರುವುದಾಗಿ ಹೇಳಿದ್ದಾರೆ.
ಈ ನಡುವೆ ಅವರು ಯುಕೆ ಸಂಸತ್ತಿನಲ್ಲಿ ವಿದಾಯ ಭಾಷಣ ಮಾಡಿದ್ದು, ಭಾಷಣವು ವೈರಲ್ ಆಗುತ್ತಿದ್ದಂತೆ, ಆಸಕ್ತಿದಾಯಕ ಸಂಗತಿಯು ನೆಟ್ಟಿಗರನ್ನು ಸೆಳೆಯಿತು. ಮಾಜಿ ಪ್ರಧಾನಿ ಥೆರೆಸಾ ಮೇ, ಬೋರಿಸ್ ಪರವಾಗಿ ಎದು ನಿಂತು ಚಪ್ಪಾಳೆ ತಟ್ಟಲು ಆಸಕ್ತಿ ತೋರಿಸದ ಪ್ರಸಂಗ ನಡೆಯಿತು.
ಜಾನ್ಸನ್ ಅವರು ‘ಟರ್ಮಿಮಿನೇಟರ್ 2: ಜಡ್ಜ್ಮೆಂಟ್ ಡೇ’ ಸಂವಾದವನ್ನು ಉಲ್ಲೇಖಿಸಿ ತಮ್ಮ ಭಾಷಣವನ್ನು ಕೊನೆಗೊಳಿಸಿದರು. ಈ ದೇಶವನ್ನು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನಾವು ಸಹಾಯ ಮಾಡಿದ್ದೇವೆ ಎಂದು ಹೇಳಲು ಮರೆಯಲಿಲ್ಲ.
ಭಾಷಣವು ಕೊನೆಯಲ್ಲಿ ಅಲ್ಲಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಮಾಜಿ ಪ್ರಧಾನಿ ಥೆರೆಸಾ ಮೇ ಮಾತ್ರ ಕೆಲ ಕ್ಷಣ ಕುಳಿತೇ ಇದ್ದರು. ಎಲ್ಲರೂ ಚಪ್ಪಾಳೆ ತಟ್ಟುತ್ತಿದ್ದರೂ ಅವರೊಬ್ಬರು ಮಾತ್ರ ಸುಮ್ಮನಿದ್ದರು. ಈ ಬೆಳವಣಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರಲ್ಲಿ ಕೆಲವರು ಈ ವರ್ತನೆಯನ್ನು ಟೀಕಿಸಿದ್ದಾರೆ.