ಇದೊಂದು ಪ್ರೇರಣದಾಯಕ ಸುದ್ದಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಗಾಲಿಕುರ್ಚಿಯಲ್ಲಿ ಸ್ವಿಗ್ಗಿ ಪ್ರತಿನಿಧಿಯೊಬ್ಬರು ಫುಡ್ ಡೆಲವರಿ ಮಾಡುವುದನ್ನು ಕಾಣಬಹುದು.
ವಿಶೇಷ ಸಾಮರ್ಥ್ಯವುಳ್ಳ ಯುವತಿಯೊಬ್ಬರು ಗಾಲಿ ಕುರ್ಚಿಯಲ್ಲಿ ಆಹಾರವನ್ನು ತಲುಪಿಸುತ್ತಿರುವುದನ್ನು ಕಾಣಬಹುದು. ಇದನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಆಕೆಯ ಹಿಂದೆ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು 6 ಸೆಕೆಂಡುಗಳ ಕ್ಲಿಪ್ ಅನ್ನು ರೆಕಾರ್ಡ್ ಮಾಡಿದ್ದಾರೆ. ಆಕೆಯ ಸಮವಸ್ತ್ರ ಮತ್ತು ಬ್ಯಾಗ್ನಲ್ಲಿರುವ ಲೋಗೋ ಪ್ರಕಾರ, ಡೆಲಿವರಿ ಏಜೆಂಟ್ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದಾರೆಂಬುದು ಸ್ಪಷ್ಟ.
ಖಂಡಿತ ಜೀವನವು ಕಷ್ಟಕರವಾಗಿದೆ, ಆದರೆ ನಾವು ಸೋಲನ್ನು ಒಪ್ಪಿಕೊಳ್ಳಲು ಕಲಿತಿಲ್ಲ. ಎಂದು ಕ್ಲಿಪ್ ಅನ್ನು ಹಂಚಿಕೊಳ್ಳುವಾಗ ಸ್ವಾತಿ ಮಲಿವಾಲ್ ಬರೆದುಕೊಂಡಿದ್ದಾರೆ.
ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ನಂತರ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನೆಟ್ಟಿಗರು ಆ ಯುವತಿಯ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ ಮತ್ತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.