alex Certify ತುಂಟಾಟಕ್ಕೆ ವಯಸ್ಸಿನ ಮಿತಿ ಬೇಕೇ ? ಇಲ್ಲಿದೆ ಉಲ್ಲಾಸದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಟಾಟಕ್ಕೆ ವಯಸ್ಸಿನ ಮಿತಿ ಬೇಕೇ ? ಇಲ್ಲಿದೆ ಉಲ್ಲಾಸದ ವಿಡಿಯೋ

ಮೋಜು ಮಸ್ತಿ ಮಾಡಲು ಚಿಕ್ಕವರಾಗೇ ಇರಬೇಕು ಎಂದಲ್ಲ. ಮಗುವಿನ ಮನಸ್ಸಿರುವ ದೊಡ್ಡವರು ಕೂಡಾ ಮಕ್ಕಳಂತೆ ಆಡಿ ನಲಿಯಬಹುದು ಎನ್ನುವುದಕ್ಕೆ, ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವೀಡಿಯೋ ಉತ್ತಮ ಉದಾಹರಣೆ.

ರಸ್ತೆಯಲ್ಲಿ ನಡೆದು ಹೋಗುವಾಗ ವೇಗವಾಗಿ ಬರುವ ವಾಹನಗಳಿಂದ ಮೈ ಮೇಲೆ ಕೊಚ್ಚೆ ನೀರು ಸಿಡಿದರೆ ಯಾರಿಗಾದರೂ ಸಿಟ್ಟು ಬರುತ್ತೆ ಅಲ್ವೇ ? ಆದ್ರೆ ಇಲ್ಲಿಬ್ಬರು ಮಧ್ಯ ವಯಸ್ಸಿನ ಪುರುಷರು ರಸ್ತೆ ಬದಿಯಲ್ಲಿ ನಿಂತು ತಾವಾಗಿಯೇ ಕೊಚ್ಚೆ ನೀರು ಸಿಡಿಸಿಕೊಳ್ಳುತ್ತಿದ್ದಾರೆ.

ಹೌದು, ರಸ್ತೆಯಲ್ಲಿ ಹಾದು ಹೋಗುತ್ತಿರುವ ಕಾರ್ ಡ್ರೈವರ್ ಗಳಿಗೆ ತಮ್ಮ ಮೇಲೆ ಕೊಚ್ಚೆ ನೀರು ಸಿಡಿಸುವಂತೆ ತಾವಾಗಿಯೇ ಕೇಳಿಕೊಳ್ಳುತ್ತಿದ್ದಾರೆ. ಇದು ಕೆಲವರಿಗೆ ತಮಾಷೆಯಾಗಿ, ವಿಚಿತ್ರವಾಗಿ ಅನ್ನಿಸಿದರೂ ಈ ಇಬ್ಬರು ಮಾತ್ರ ತಮ್ಮ ಕಳೆದು ಹೋದ ಬಾಲ್ಯದ ದಿನಗಳನ್ನು ಮತ್ತೆ ಎಂಜಾಯ್ ಮಾಡೋ ಮೂಡ್ನಲ್ಲಿ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...