
ಮೋಜು ಮಸ್ತಿ ಮಾಡಲು ಚಿಕ್ಕವರಾಗೇ ಇರಬೇಕು ಎಂದಲ್ಲ. ಮಗುವಿನ ಮನಸ್ಸಿರುವ ದೊಡ್ಡವರು ಕೂಡಾ ಮಕ್ಕಳಂತೆ ಆಡಿ ನಲಿಯಬಹುದು ಎನ್ನುವುದಕ್ಕೆ, ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವೀಡಿಯೋ ಉತ್ತಮ ಉದಾಹರಣೆ.
ರಸ್ತೆಯಲ್ಲಿ ನಡೆದು ಹೋಗುವಾಗ ವೇಗವಾಗಿ ಬರುವ ವಾಹನಗಳಿಂದ ಮೈ ಮೇಲೆ ಕೊಚ್ಚೆ ನೀರು ಸಿಡಿದರೆ ಯಾರಿಗಾದರೂ ಸಿಟ್ಟು ಬರುತ್ತೆ ಅಲ್ವೇ ? ಆದ್ರೆ ಇಲ್ಲಿಬ್ಬರು ಮಧ್ಯ ವಯಸ್ಸಿನ ಪುರುಷರು ರಸ್ತೆ ಬದಿಯಲ್ಲಿ ನಿಂತು ತಾವಾಗಿಯೇ ಕೊಚ್ಚೆ ನೀರು ಸಿಡಿಸಿಕೊಳ್ಳುತ್ತಿದ್ದಾರೆ.
ಹೌದು, ರಸ್ತೆಯಲ್ಲಿ ಹಾದು ಹೋಗುತ್ತಿರುವ ಕಾರ್ ಡ್ರೈವರ್ ಗಳಿಗೆ ತಮ್ಮ ಮೇಲೆ ಕೊಚ್ಚೆ ನೀರು ಸಿಡಿಸುವಂತೆ ತಾವಾಗಿಯೇ ಕೇಳಿಕೊಳ್ಳುತ್ತಿದ್ದಾರೆ. ಇದು ಕೆಲವರಿಗೆ ತಮಾಷೆಯಾಗಿ, ವಿಚಿತ್ರವಾಗಿ ಅನ್ನಿಸಿದರೂ ಈ ಇಬ್ಬರು ಮಾತ್ರ ತಮ್ಮ ಕಳೆದು ಹೋದ ಬಾಲ್ಯದ ದಿನಗಳನ್ನು ಮತ್ತೆ ಎಂಜಾಯ್ ಮಾಡೋ ಮೂಡ್ನಲ್ಲಿ ಇದ್ದಾರೆ.