alex Certify ಗುಟ್ಕಾ ಜಗಿಯುತ್ತಾ ಕ್ರಿಕೆಟ್‌ ಪಂದ್ಯ ವೀಕ್ಷಣೆ: ವೈರಲ್ ವಿಡಿಯೋಗೆ ಮೀಮ್ಸ್ ಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಟ್ಕಾ ಜಗಿಯುತ್ತಾ ಕ್ರಿಕೆಟ್‌ ಪಂದ್ಯ ವೀಕ್ಷಣೆ: ವೈರಲ್ ವಿಡಿಯೋಗೆ ಮೀಮ್ಸ್ ಗಳ ಸುರಿಮಳೆ

ಕಾನ್ಪುರ: ನಮಗೆಲ್ಲರಿಗೂ ತಿಳಿದಿರುವಂತೆ, ಉತ್ತರ ಪ್ರದೇಶದ ಕಾನ್ಪುರವು ತಂಬಾಕು ಮತ್ತು ಪಾನ್ ಮಸಾಲಾ ಬಳಕೆಗೆ ಹೆಸರುವಾಸಿಯಾಗಿದೆ. ಇದೀಗ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ವ್ಯಕ್ತಿಯೊಬ್ಬರು ಗುಟ್ಕಾ ಅಗಿಯುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ.

ವ್ಯಕ್ತಿಯೊಬ್ಬರು ಸ್ಟೇಡಿಯಂನಲ್ಲಿ ಕುಳಿತು ಕ್ರಿಕೆಟ್ ವೀಕ್ಷಿಸುವಾಗ ಫೋನ್‌ನಲ್ಲಿ ಮಾತನಾಡುತ್ತಾ ಗುಟ್ಕಾ ಜಗಿದಿದ್ದಾರೆ. ಇದು ಗುರುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ನ ಆರಂಭಿಕ ದಿನವಾಗಿತ್ತು, ಆದರೆ ಗುಟ್ಕಾ ಜಗಿಯುತ್ತಿರುವ ವ್ಯಕ್ತಿಯ ವಿಡಿಯೋ ಇದೀಗ ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗಿದೆ.

ಪಂದ್ಯದ 70 ಓವರ್‌ಗಳು ಮುಗಿದ ಬಳಿಕ ಈ ಹಾಸ್ಯಾಸ್ಪದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಆ ವ್ಯಕ್ತಿ ತನ್ನ ಬಾಯಿಯಲ್ಲಿ ಗುಟ್ಕಾ ತುಂಬಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿರುವುದು ಕ್ಯಾಮರಾ ಕಣ್ಣಿಗೆ ಬಿದ್ದಿದೆ.

ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಮೀಮ್ಸ್ ಗಳು ಪ್ರವಾಹದಂತೆ ಸೃಷ್ಟಿಯಾಗಿದೆ. ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಟ್ವಿಟರ್‌ನಲ್ಲಿ ಮೀಮ್ ಅನ್ನು ಹಂಚಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...