alex Certify ಹಿಜಾಬ್​ ಧರಿಸಿದ ವಿದ್ಯಾರ್ಥಿನಿಯರಿಂದ ʼಓಣಂʼ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್​ ಧರಿಸಿದ ವಿದ್ಯಾರ್ಥಿನಿಯರಿಂದ ʼಓಣಂʼ ಆಚರಣೆ

 

ಉತ್ತರ ಕೇರಳದ ವಂಡೂರ್​ ಪ್ರದೇಶದ ಪ್ರೌಢಶಾಲೆಯೊಂದರಲ್ಲಿ ಹಿಜಾಬ್​ ಧರಿಸಿದ್ದ ವಿದ್ಯಾರ್ಥಿನಿಯರು ಓಣಂ ಆಚರಿಸುತ್ತಿರುವ ಕಿರು ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕಾಂಗ್ರೆಸ್​ ನಾಯಕ ಶಶಿ ತರೂರ್​ ಅವರು ಟ್ವೀಟ್​ ಮಾಡಿ ಲೈಕ್​ ಮಾಡಿದ್ದಾರೆ.

ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಈ ವಿಡಿಯೊ, ಇಲ್ಲಿನ ವಂಡೂರಿನ ಸರ್ಕಾರಿ ಬಾಲಕಿಯರ ಹೈಯರ್​ ಸೆಕೆಂಡರಿ ಶಾಲೆಯದ್ದಾಗಿದೆ. ಹಿಜಾಬ್​ ಧರಿಸಿದ ಹಲವಾರು ವಿದ್ಯಾರ್ಥಿನಿಯರು ಇತರ ವಿದ್ಯಾರ್ಥಿಗಳೊಂದಿಗೆ ಸೀರೆಯುಟ್ಟು ಸಂಗೀತಕ್ಕೆ ನೃತ್ಯ ಮಾಡುವುದನ್ನು ತೋರುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ಜನರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಲವರು ಕರ್ನಾಟಕದ ಹಿಜಾಬ್​ ಬೆಳವಣಿಗೆಯನ್ನು ನೆನಪಿಸಿಕೊಂಡಿದ್ದಾರೆ.

ಓಣಂ ಅನ್ನು ಹಿಂದೂಗಳ ಹಬ್ಬ ಎಂದು ಹೇಳುವ ಕೀಳು ಜೀವಗಳಿಗೆ ಮತ್ತು ಹಿಜಾಬ್​ ಧರಿಸಿದ ಹೆಣ್ಣುಮಕ್ಕಳಿಗೆ ಶಿಕ್ಷಣ ನಿರಾಕರಿಸಿದ ನಮ್ಮ ನೆರೆಯ ರಾಜ್ಯಕ್ಕೆ ಸಮರ್ಪಿಸಲಾಗಿದೆ ಎಂದು ಒಬ್ಬರು ಕರ್ನಾಟಕ ಸರ್ಕಾರವನ್ನು ಕೆಣಕಿದ್ದಾರೆ.

ಸ್ವೀಡನ್​ನ ಉಪ್ಸಲಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಎಂದು ಹೇಳಿಕೊಳ್ಳುವ ಅಶೋಕ್​ ಸೆವೈನ್​ ಅವರ ಮತ್ತೊಂದು ಟ್ವೀಟ್​, ಶಾಲೆಯೊಂದರಲ್ಲಿ ಹಿಜಾಬ್​ ಧರಿಸಿದ ಮುಸ್ಲಿಂ ಹುಡುಗಿಯರು ಓಣಂ ಆಚರಿಸುತ್ತಿರುವುದು ಕೇರಳದ ಜನರ ಹಬ್ಬವನ್ನು ಕೊಯ್ಲು ಮಾಡುತ್ತಿರುವಂತಿದೆ. ಬಲಪಂಥೀಯರು ಹೇಳಿಕೊಂಡಂತೆ ಇದು ಕೇವಲ ಹಿಂದೂಗಳದ್ದಲ್ಲ…! ಎಂದು ಕುಟುಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...