alex Certify ಈ ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾಳೆ​ ಬೀದಿಯಲ್ಲಿ ಪೂರಿ ಮಾರುತ್ತಿದ್ದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾಳೆ​ ಬೀದಿಯಲ್ಲಿ ಪೂರಿ ಮಾರುತ್ತಿದ್ದ ಯುವತಿ

ಪಂಜಾಬ್​: ಆಹಾರ ಬ್ಲಾಗರ್ ಒಬ್ಬರು ಪಂಜಾಬ್‌ನ ಬೀದಿಯಲ್ಲಿ ಸುತ್ತುತ್ತಿರುವ ಸಂದರ್ಭದಲ್ಲಿ ಹಾದಿಯಲ್ಲಿ ಚಾಟ್ ಮಾರಾಟ ಮಾಡುತ್ತಿದ್ದ ಯುವತಿಯೊಬ್ಬರನ್ನು ಕಂಡು ಕುತೂಹಲಗೊಂಡು ಅದರ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ.

ಈ ಉಪಾಹಾರ ಗೃಹ ಇತರವುಗಳಿಗಿಂತ ಭಿನ್ನವಾಗಿತ್ತು, ಅದಕ್ಕಾಗಿಯೇ ತನ್ನ ಗಮನವನ್ನು ಸೆಳೆಯಿತು ಎಂದು ಅವರು ಹೇಳಿದ್ದಾರೆ. ಈ ರಸ್ತೆಬದಿಯ ಉಪಾಹಾರ ಗೃಹದ ಪ್ರಮುಖ ಅಂಶವೆಂದರೆ ಇಲ್ಲಿ ಯುವತಿಯೊಬ್ಬಳು ಆಹಾರ ಪೂರೈಕೆ ಮಾಡುತ್ತಿರುವುದು. ಮಹಿಳೆಯರು ಆಹಾರ ನೀಡುವುದು ಹೊಸ ವಿಷಯವಲ್ಲ. ಆದರೆ ಇಲ್ಲಿ ಚಾಟ್ ಮಾರಾಟ ಮಾಡುತ್ತಿರುವ ಯುವತಿ ತನ್ನ ಕೂದಲನ್ನು ಪಂಜಾಬ್​ನ ಪುರುಷರಂತೆ ಮೇಲೆ ಕಟ್ಟಿಕೊಂಡಿರುವುದು ಫುಡ್​ ಬ್ಲಾಗರ್​ ಗಮನ ಸೆಳೆದಿದೆ.

ಈ ವೈರಲ್​ ವಿಡಿಯೋಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ 9 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಆಲೂ ಟಿಕ್ಕಿ ಚಾಟ್‌ನ ತಟ್ಟೆಯನ್ನು ಯುವತಿ ಸಿದ್ಧಪಡಿಸುತ್ತಿರುವುದನ್ನು ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...