ಪಂಜಾಬ್: ಆಹಾರ ಬ್ಲಾಗರ್ ಒಬ್ಬರು ಪಂಜಾಬ್ನ ಬೀದಿಯಲ್ಲಿ ಸುತ್ತುತ್ತಿರುವ ಸಂದರ್ಭದಲ್ಲಿ ಹಾದಿಯಲ್ಲಿ ಚಾಟ್ ಮಾರಾಟ ಮಾಡುತ್ತಿದ್ದ ಯುವತಿಯೊಬ್ಬರನ್ನು ಕಂಡು ಕುತೂಹಲಗೊಂಡು ಅದರ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಈ ಉಪಾಹಾರ ಗೃಹ ಇತರವುಗಳಿಗಿಂತ ಭಿನ್ನವಾಗಿತ್ತು, ಅದಕ್ಕಾಗಿಯೇ ತನ್ನ ಗಮನವನ್ನು ಸೆಳೆಯಿತು ಎಂದು ಅವರು ಹೇಳಿದ್ದಾರೆ. ಈ ರಸ್ತೆಬದಿಯ ಉಪಾಹಾರ ಗೃಹದ ಪ್ರಮುಖ ಅಂಶವೆಂದರೆ ಇಲ್ಲಿ ಯುವತಿಯೊಬ್ಬಳು ಆಹಾರ ಪೂರೈಕೆ ಮಾಡುತ್ತಿರುವುದು. ಮಹಿಳೆಯರು ಆಹಾರ ನೀಡುವುದು ಹೊಸ ವಿಷಯವಲ್ಲ. ಆದರೆ ಇಲ್ಲಿ ಚಾಟ್ ಮಾರಾಟ ಮಾಡುತ್ತಿರುವ ಯುವತಿ ತನ್ನ ಕೂದಲನ್ನು ಪಂಜಾಬ್ನ ಪುರುಷರಂತೆ ಮೇಲೆ ಕಟ್ಟಿಕೊಂಡಿರುವುದು ಫುಡ್ ಬ್ಲಾಗರ್ ಗಮನ ಸೆಳೆದಿದೆ.
ಈ ವೈರಲ್ ವಿಡಿಯೋಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ 9 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಆಲೂ ಟಿಕ್ಕಿ ಚಾಟ್ನ ತಟ್ಟೆಯನ್ನು ಯುವತಿ ಸಿದ್ಧಪಡಿಸುತ್ತಿರುವುದನ್ನು ಕಾಣಬಹುದು.