ಇರಾನ್ನಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆಯ ನಡುವೆ ಈಜಿಪ್ಟ್ ಮಾಜಿ ಅಧ್ಯಕ್ಷ ಗಮಾಲ್ ಅಬ್ದೆಲ್ ನಾಸರ್ ಅವರ ಬಹಳ ಹಳೆಯ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಅವರು ಈಜಿಪ್ಟ್ನಲ್ಲಿ ಮಹಿಳೆಯರಿಗೆ ಹಿಜಾಬ್ ಅನ್ನು ಕಡ್ಡಾಯಗೊಳಿಸುವ ಕೋರಿಕೆಯನ್ನು ಅಪಹಾಸ್ಯ ಮಾಡಿದ್ದಾರೆ.
1953ರಲ್ಲಿ ಮುಸ್ಲಿಂ ಬ್ರದರ್ಹುಡ್ನ ಮುಖ್ಯಸ್ಥರಾಗಿದ್ದ ಹಸನ್ ಅಲ್-ಹುದೈಬಿ ಅವರೊಂದಿಗೆ ತಮ್ಮ ಅಭಿಪ್ರಾಯ ವಿನಿಮಯ ಮಾಡುವ ಸಂದರ್ಭದಲ್ಲಿ ನಡೆದ ಚರ್ಚೆಯನ್ನು ಅವರು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಈ ಕ್ಲಿಪ್ ಅನ್ನು ಈಗ ಪತ್ರಕರ್ತ ಸೀಮಸ್ ಮಲೆಕಾಫ್ಜಲಿ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾವು ನಿಜವಾಗಿಯೂ ಮುಸ್ಲಿಂ ಬ್ರದರ್ಹುಡ್ ಜೊತೆ ರಾಜಿ ಮಾಡಿಕೊಳ್ಳಲು ಬಯಸಿದ್ದೆವು. ನಾನು ಮುಸ್ಲಿಂ ಬ್ರದರ್ಹುಡ್ ಮುಖ್ಯಸ್ಥರನ್ನು ಭೇಟಿಯಾದೆ ಮತ್ತು ಅವರು ತಮ್ಮ ವಿನಂತಿಗಳನ್ನು ನನ್ನ ಮುಂದಿಟ್ಟರು. ಏನು ಗೊತ್ತ? ಈಜಿಪ್ಟ್ನಲ್ಲಿ ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಮತ್ತು ಬೀದಿಯಲ್ಲಿ ನಡೆಯುವ ಪ್ರತಿಯೊಬ್ಬ ಮಹಿಳೆ ತರ್ಹಾ (ಸ್ಕಾರ್ಫ್) ಧರಿಸುವಂತೆ ಮಾಡಿ ಎಂದರು. ನಾನು ಅಸಾಧ್ಯವೆಂದೆ. ಜನರಿಗೆ ಅವರದ್ದೇ ಆದ ನಿಯಮಗಳಿರುತ್ತವೆ. ನಿಮ್ಮ ಮಗಳು ಮೆಡಿಸನ್ ಓದುತ್ತಿದ್ದಾಳೆ. ಅವಳು ಬುರ್ಕಾ ತೊಡುತ್ತಾಳೆಯೇ ಎಂದು ಪ್ರಶ್ನಿಸಿದೆ ಎಂದು ಭಾಷಣ ಮಾಡಿದಾಗ ಅವರ ಮುಂದೆ ಸಭೆಯಲ್ಲಿ ಕಿಕ್ಕಿರಿದುತುಂಬಿದ್ದ ಜನ ಜೋರಾಗಿ ಚಪ್ಪಾಳೆ ತಟ್ಟುತ್ತಾರೆ.
ಅಪ್ಲೋಡ್ ಮಾಡಿದ ನಂತರ ವಿಡಿಯೋ ವೈರಲ್ ಆಗಿ ಸುಮಾರು 765 ಕೆ ವೀಣೆಗಳನ್ನು ಕಂಡಿದೆ. ನಾನು ಇತ್ತೀಚೆಗೆ ಅವರ ಬಹಳಷ್ಟು ಭಾಷಣಗಳನ್ನು ನೋಡಿದ್ದೇನೆ ಮತ್ತು ಅವರು ಪ್ರತಿ ಬಾರಿಯೂ ನನ್ನನ್ನು ನಗಿಸುತ್ತಾರೆ. ಇಂಗ್ಲಿಷ್ನಲ್ಲಿ ಹಾಸ್ಯವು ಕಳೆದುಹೋಗಿದೆಯೇ ಎಂದು ನನಗೆ ತಿಳಿದಿಲ್ಲ ಆದರೆ ಈ ವ್ಯಕ್ತಿ ಅನೇಕ ಈಜಿಪ್ಟಿನವರಿಗೆ ಹೀರೋ ಆಗಿದ್ದಲ್ಲದೆ ಒಳ್ಳೆಯ ವೈಬ್ಸ್ಎಸ್ಎಸ್ ಎಂದು ಶೀರ್ಷಿಕೆೆ ನೀಡಲಾಗಿದೆ.
ಮಹಿಳೆಯರಿಗೆ ಇಸ್ಲಾಮಿಕ್ ಗಣರಾಜ್ಯದ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ವಿಚಾರದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ 22 ವರ್ಷದ ಇರಾನಿನ ಮಹಿಳೆ ಮಹ್ಸಾ ಅಮಿನಿಯ ಮರಣದ ನಂತರ ಡ್ರೆಸ್ ಕೋಡ್ ವಿಷಯ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಘಟನೆ ವ್ಯಾಪಕ ಪ್ರತಿಭಟನೆಗೆ ಸಹ ಕಾರಣವಾಗಿದೆ.
ನೈತಿಕತೆಯ ಪೊಲೀಸ್ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಇರಾನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುತ್ತಿದ್ದಾರೆ, ಅವರ ಹಿಜಾಬ್ಗಳ ಸುಡುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕೃತ್ಯಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.