alex Certify ರೈಲಿಗೆ ಬರುವವರಿಗೆ ನಿಲ್ದಾಣದಲ್ಲಿಯೇ ಪುಕ್ಕಟೆ ಸ್ನಾನ….! ವೈರಲ್​ ವಿಡಿಯೋಗೆ ನಕ್ಕು ಸುಸ್ತಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿಗೆ ಬರುವವರಿಗೆ ನಿಲ್ದಾಣದಲ್ಲಿಯೇ ಪುಕ್ಕಟೆ ಸ್ನಾನ….! ವೈರಲ್​ ವಿಡಿಯೋಗೆ ನಕ್ಕು ಸುಸ್ತಾದ ನೆಟ್ಟಿಗರು

ದೇಶದ ವಿವಿಧ ರೈಲು ನಿಲ್ದಾಣಗಳ ಅವ್ಯವಸ್ಥೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಡಿಯೋ ಒಂದು ಹಿನ್ನೆಲೆ ಸಂಗೀತದ ಜತೆಗೆ ವೈರಲ್​ ಆಗುತ್ತಿದ್ದು, ನಗೆಗಡಲಿನಲ್ಲಿ ತೇಲಿಸುವಂತೆ ಮಾಡಿದೆ.

ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಏನೆಂದರೆ, ರೈಲ್ವೆ ನಿಲ್ದಾಣವೊಂದರ ನೀರಿನ ಟ್ಯಾಪ್ ಹಾಳಾಗಿದೆ. ಇದು ಸಂಪೂರ್ಣ ಫೋರ್ಸ್​ನಿಂದ ಚಿಮ್ಮುತ್ತಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಅತ್ತ ಕಡೆಯಿಂದ ಹೋಗುವವರಿಗೆ ಸಂಪೂರ್ಣ ಸ್ನಾನ ಮಾಡಿಸುತ್ತಿದೆ.

ಇದು ಯಾವ ರೈಲು ನಿಲ್ದಾಣ ಎಂದು ವಿಡಿಯೋದಲ್ಲಿ ಹೇಳಿಲ್ಲವಾದರೂ, ವಿಡಿಯೋ ನೋಡಿದವರು ಮಾತ್ರ ಥಹರೇವಾರಿ ಕಮೆಂಟ್​ ಮಾಡುತ್ತಿದ್ದಾರೆ. ರೈಲಿಗೆ ಬರುವಾಗ ಮನೆಯಲ್ಲಿ ಸ್ನಾನ ಮಾಡಿಕೊಂಡು ಬರುವ ಅವಶ್ಯಕತೆ ಇಲ್ಲ, ಪುಕ್ಕಟೆ ಸ್ನಾನದ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ ಎಂದು ಹಲವರು ತಮಾಷೆ ಮಾಡುತ್ತಿದ್ದರೆ, ಇಲ್ಲಿಗೆ ಬರುವ ಪ್ರಯಾಣಿಕರ ಪೇಚಾಟ ಮಾತ್ರ ನೋಡಲಾಗುತ್ತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...