
75 ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವಂತೆ ಸಂಭ್ರಮಾಚರಣೆ ಹೆಚ್ಚಾಗುತ್ತಿದೆ. ವಿವಿಧ ನಗರಗಳಲ್ಲಿ ಬಗೆ ಬಗೆಯ ಅಲಂಕಾರ ನಡೆಯುತ್ತಿದೆ. ಇದೇ ರೀತಿ ಭೋಪಾಲ್ ನಗರದ ಅದ್ಭುತ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಭಾರತದ ರಾಷ್ಟ್ರ ಧ್ವಜದಿಂದ ನಗರದ ಸೇತುವೆ, ನಗರದ ಜನನಿಬಿಡ ರಸ್ತೆಯನ್ನು ಅಲಂಕರಿಸಿದ್ದು, ವಿಡಿಯೋದಲ್ಲಿ ನೋಡಬಹುದು.
ಹೆಚ್ಚು ಗಮನ ಸೆಳೆಯುವುದು ರಸ್ತೆಗೆ ಹೊಂದಿಕೊಂಡಂತಿರುವ ಪಾದಚಾರಿ ಮಾರ್ಗವನ್ನು ಧ್ವಜದಿಂದ ಅಲಂಕರಿಸಲಾಗಿದೆ. ವಿಡಿಯೋವನ್ನು ನೋಡಿದ ಟ್ವಿಟ್ಟರ್ ಬಳಕೆದಾರರು ಖುಷಿಯಿಂದ ಕಾಮೆಂಟ್ ಮಾಡಿದ್ದು, ಸಾವಿರಾರು ವೀಕ್ಷಣೆ ಕಂಡಿದೆ.
ಈ ವರ್ಷ ʼಆಜಾದಿ ಕಾ ಅಮೃತ್ ಮಹೋತ್ಸವʼ ಎಂಬ ಶೀರ್ಷಿಕೆಯಡಿಯಲ್ಲಿ ಸರ್ಕಾರವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.