alex Certify ಬಾಲಿವುಡ್​ ಹಾಡಿಗೆ ಆಫ್ರಿಕನ್​ ಪುಟಾಣಿಗಳಿಂದ ಸೂಪರ್​ ಡಾನ್ಸ್​: ಶ್ಲಾಘನೆಗಳ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ಹಾಡಿಗೆ ಆಫ್ರಿಕನ್​ ಪುಟಾಣಿಗಳಿಂದ ಸೂಪರ್​ ಡಾನ್ಸ್​: ಶ್ಲಾಘನೆಗಳ ಮಹಾಪೂರ

ಸಂಗೀತಕ್ಕೆ ಗಡಿ, ಭಾಷೆಯ ಮಿತಿಯಿಲ್ಲ. ಯಾವುದೋ ಭಾಷೆಯ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ ಅದರ ರಿದಮ್​ಗೆ ಮನಸೋತು ಕುಣಿಯುವುದು ಇದೆ, ಅರ್ಥವೇ ಗೊತ್ತಿಲ್ಲದೇ ಹಾಡುಗಳನ್ನು ಗುನುಗುನಿಸುವುದೂ ಇದೆ. ಅದರಲ್ಲಿಯೂ ಮಕ್ಕಳು ಇಂಥ ಹಾಡುಗಳಿಗೆ ಹೆಜ್ಜೆ ಹಾಕಿದರೆ ಅದರ ಸೌಂದರ್ಯವೇ ಬೇರೆ. ಅಂಥದ್ದೇ ಒಂದು ಬಾಲಿವುಡ್​ ಹಾಡಿನ ನೃತ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆಫ್ರಿಕನ್ ಹುಡುಗರು ಮತ್ತು ಹುಡುಗಿಯರು ಬಾಲಿವುಡ್​ ಸಿನಿಮಾ ಒಂದರ ಹಾಡಿಗೆ ನರ್ತಿಸಿದ್ದು, ನೆಟ್ಟಿಗರು ಮನಸೋತಿದ್ದಾರೆ. ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳು 2007 ರಲ್ಲಿ ಬಿಡುಗಡೆಯಾದ ಬಾಲಿವುಡ್​ನ ಪಾರ್ಟನರ್​ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಗೋವಿಂದ, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಲಾರಾ ದತ್ತಾ ಅಭಿನಯದ ಸೋನಿ ದೇ ನಖ್ರೆ ಎಂಬ ಪ್ರಸಿದ್ಧ ಹಾಡಿಗೆ ಯಾವ ನಾಯಕ, ನಾಯಕಿಗೂ ಕಡಿಮೆ ಇಲ್ಲದಂತೆ ಈ ಮಕ್ಕಳು ನರ್ತಿಸಿದ್ದಾರೆ. ತಮಾಷೆಯ ಜತೆಗೆ ನೃತ್ಯವನ್ನೂ ಮಾಡಿರುವ ಮಕ್ಕಳ ಡಾನ್ಸ್​ಗೆ ನೋಡುಗರು ಫಿದಾ ಆಗದೇ ಇರಲು ಸಾಧ್ಯವಿಲ್ಲ. ಈ ನೃತ್ಯಕ್ಕೆ ಥಹರೇವಾರಿ ಕಮೆಂಟ್ಸ್​ಗಳು ಬಂದಿದ್ದು, ಜನರು ಹೊಗಳಿಕೆಯ ಮಹಾಪೂರವನ್ನೇ ಹರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...