
ಸಂಗೀತಕ್ಕೆ ಗಡಿ, ಭಾಷೆಯ ಮಿತಿಯಿಲ್ಲ. ಯಾವುದೋ ಭಾಷೆಯ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ ಅದರ ರಿದಮ್ಗೆ ಮನಸೋತು ಕುಣಿಯುವುದು ಇದೆ, ಅರ್ಥವೇ ಗೊತ್ತಿಲ್ಲದೇ ಹಾಡುಗಳನ್ನು ಗುನುಗುನಿಸುವುದೂ ಇದೆ. ಅದರಲ್ಲಿಯೂ ಮಕ್ಕಳು ಇಂಥ ಹಾಡುಗಳಿಗೆ ಹೆಜ್ಜೆ ಹಾಕಿದರೆ ಅದರ ಸೌಂದರ್ಯವೇ ಬೇರೆ. ಅಂಥದ್ದೇ ಒಂದು ಬಾಲಿವುಡ್ ಹಾಡಿನ ನೃತ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಫ್ರಿಕನ್ ಹುಡುಗರು ಮತ್ತು ಹುಡುಗಿಯರು ಬಾಲಿವುಡ್ ಸಿನಿಮಾ ಒಂದರ ಹಾಡಿಗೆ ನರ್ತಿಸಿದ್ದು, ನೆಟ್ಟಿಗರು ಮನಸೋತಿದ್ದಾರೆ. ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳು 2007 ರಲ್ಲಿ ಬಿಡುಗಡೆಯಾದ ಬಾಲಿವುಡ್ನ ಪಾರ್ಟನರ್ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಗೋವಿಂದ, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಲಾರಾ ದತ್ತಾ ಅಭಿನಯದ ಸೋನಿ ದೇ ನಖ್ರೆ ಎಂಬ ಪ್ರಸಿದ್ಧ ಹಾಡಿಗೆ ಯಾವ ನಾಯಕ, ನಾಯಕಿಗೂ ಕಡಿಮೆ ಇಲ್ಲದಂತೆ ಈ ಮಕ್ಕಳು ನರ್ತಿಸಿದ್ದಾರೆ. ತಮಾಷೆಯ ಜತೆಗೆ ನೃತ್ಯವನ್ನೂ ಮಾಡಿರುವ ಮಕ್ಕಳ ಡಾನ್ಸ್ಗೆ ನೋಡುಗರು ಫಿದಾ ಆಗದೇ ಇರಲು ಸಾಧ್ಯವಿಲ್ಲ. ಈ ನೃತ್ಯಕ್ಕೆ ಥಹರೇವಾರಿ ಕಮೆಂಟ್ಸ್ಗಳು ಬಂದಿದ್ದು, ಜನರು ಹೊಗಳಿಕೆಯ ಮಹಾಪೂರವನ್ನೇ ಹರಿಸಿದ್ದಾರೆ.