alex Certify ಕ್ಷಣಾರ್ಧದಲ್ಲಿ ನೆಲಕ್ಕುರುಳಿದ ಗಗನಚುಂಬಿ ಕಟ್ಟಡಗಳು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷಣಾರ್ಧದಲ್ಲಿ ನೆಲಕ್ಕುರುಳಿದ ಗಗನಚುಂಬಿ ಕಟ್ಟಡಗಳು: ವಿಡಿಯೋ ವೈರಲ್

ಚೀನಾದಲ್ಲಿ ಕಳೆದ ಎಂಟು ವರ್ಷಗಳಿಂದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣವಾಗಿರದ 15 ಗಗನಚುಂಬಿ ಕಟ್ಟಡಗಳನ್ನು ಏಕಕಾಲದಲ್ಲಿ ನಾಶಪಡಿಸಲಾಯಿತು.

ಯುನ್ನಾನ್ ಪ್ರಾಂತ್ಯದ ಕುನ್ನಿಂಗ್ ನಲ್ಲಿ ದೊಡ್ಡ ಧೂಳಿನ ರಾಶಿಯೊಂದಿಗೆ ಗಗನಚುಂಬಿ ಕಟ್ಟಡಗಳು ನೆಲಕ್ಕುರುಳಿದ ವಿಡಿಯೋ ಸದ್ಯ ಭಾರಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ದಿಗ್ಭ್ರಾಂತರಾಗಿದ್ದಾರೆ.

ಪೂರ್ಣವಾಗಿರದ ಕಟ್ಟಡಗಳನ್ನು ಉರುಳಿಸಲು 4.6 ಟನ್ ಸ್ಫೋಟಕಗಳನ್ನು ಕಟ್ಟಡದ 85,000 ಬ್ಲಾಸ್ಟಿಂಗ್ ಪಾಯಿಂಟ್‌ಗಳಲ್ಲಿ ಉರುಳಿಸಲು ಇರಿಸಲಾಗಿತ್ತು. ಕೇವಲ 45 ಸೆಕೆಂಡುಗಳಲ್ಲಿ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ವರದಿ ಹೇಳಿದೆ.

ಯಾಹೂ ನ್ಯೂಸ್ ಪ್ರಕಾರ, ಕಟ್ಟಡ ನೆಲಕ್ಕುರುಳಿಸಲು ಪೂರ್ವ ತಯಾರಿ ನಡೆಸಲಾಗಿತ್ತು. ಹತ್ತಿರದಲ್ಲಿದ್ದ ಅಂಗಡಿಗಳನ್ನು ಮುಚ್ಚಲಾಗಿತ್ತು. ಅಲ್ಲದೆ ಹತ್ತಿರದ ಕಟ್ಟಡದಲ್ಲಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸಿ ಈ ಯೋಜನೆ ಕೈಗೊಳ್ಳಲಾಯಿತು.

https://www.youtube.com/watch?v=03NGeiDzSr8&feature=emb_logo

https://twitter.com/ruima/status/1437923122510917632?ref_src=twsrc%5Etfw%7Ctwcamp%5Etweetembed%7Ctwterm%5E1437923122510917632%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrend

https://twitter.com/BDettenborn/status/1438128206884663296?ref_src=twsrc%5Etfw%7Ctwcamp%5Etweetembed%7Ctwterm%5E1438128206884663296%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fvideo-of-15-skyscrap

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...