alex Certify ಮಂಚದ ಮೇಲಿದ್ದ ಹೊದಿಕೆಯೊಳಗೆ ಬೆಚ್ಚಗೆ ಮಲಗಿತ್ತು ನಾಗರಹಾವು: ಉಸಿರು ಬಿಗಿಹಿಡಿದು ನೋಡುವಂತಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಚದ ಮೇಲಿದ್ದ ಹೊದಿಕೆಯೊಳಗೆ ಬೆಚ್ಚಗೆ ಮಲಗಿತ್ತು ನಾಗರಹಾವು: ಉಸಿರು ಬಿಗಿಹಿಡಿದು ನೋಡುವಂತಿದೆ ವಿಡಿಯೋ

ನಾಗರಹಾವುಗಳು ಬೈಕ್​ನಲ್ಲಿ, ಶೂಸ್​ ಒಳಗೆ ಅಡಗಿ ಕುಳಿತಿರುವ ಹಲವಾರು ವಿಡಿಯೋಗಳು ಈಗೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಅವೆಲ್ಲವೂ ಜನರನ್ನು ಬೆಚ್ಚಿಬೀಳಿಸುವುದು ನಿಜವೇ ಆಗಿದ್ದರೂ ಈಗ ಇಲ್ಲಿ ಹೇಳುತ್ತಿರುವ ವಿಷಯ ಕೇಳಿದರೆ ಇನ್ನೂ ಹೌಹಾರಿ ಹೋಗುವುದು ಗ್ಯಾರೆಂಟಿ.

ಮಧ್ಯಪ್ರದೇಶದ ಸಿರೊಂಜಾ ಗ್ರಾಮದಲ್ಲಿ ಯುವಕನೊಬ್ಬ ತನ್ನ ಮಂಚದ ಮೇಲಿರುವ ಹೊದಿಕೆಯೊಳಗೆ ಹಾವು ಅಡಗಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾನೆ. ಕಪ್ಪು ವಿಷಕಾರಿ ನಾಗರಹಾವು ಇದಾಗಿದ್ದು, ಹೊದಿಕೆಯೊಳಕ್ಕೆ ಬೆಚ್ಚಗೆ ಮಲಗಿತ್ತು!

ಬೆಳಗ್ಗೆ ತನ್ನ ಹೊದಿಕೆಯೊಳಗೆ ಏನೋ ಚಲಿಸುತ್ತಿರುವುದನ್ನು ಕಂಡ ಯುವಕ ನಿಧಾನವಾಗಿ ಅದನ್ನು ತೆಗೆದಾಗ ಬೃಹತ್ ಕಪ್ಪು ಸರ್ಪವು ಅದರಲ್ಲಿ ಮಲಗಿದ್ದನ್ನು ನೋಡಿದ್ದಾನೆ. ಅವನು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ, ಹೊದಿಕೆಯನ್ನು ಹಾಸಿಗೆಯ ಒಂದು ಬದಿಗೆ ಎಸೆದನು, ಹಾವು ಇನ್ನೂ ಹೊದಿಕೆಯೊಳಕ್ಕೇ ಇತ್ತು.

ನಂತರ ಹಾವು ಹಿಡಿಯುವವರನ್ನು ಕರೆಸಿ, ಕೋಲಿನ ಸಹಾಯದಿಂದ ಅದನ್ನು ಹೊರಕ್ಕೆ ತೆಗೆದು ರಕ್ಷಿಸಲಾಗಿದ್ದು, ಇದರ ವಿಡಿಯೋ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...