
ರಾಜಕಾರಣಿಗಳಿಗೆ ಅದ್ಯಾಕೋ ಸಿನೆಮಾ ನಟಿಯರ ಮೇಲೆ ಒಂದು ರೀತಿಯ ಅವಿನಾಭಾವ ನಂಟು ಎಂದು ಕಾಣುತ್ತದೆ. ತಮ್ಮ ಕ್ಷೇತ್ರದ ರಸ್ತೆಗಳನ್ನು ಕಂಗನಾ ರಣಾವತ್ ಕೆನ್ನೆಗಿಂತ ನುಣುಪಾಗಿ ನಿರ್ಮಾಣ ಮಾಡುವುದಾಗಿ ಜಾರ್ಖಂಡ್‌ನ ಜಮ್ತಾರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಇರ್ಫಾನ್ ಅನ್ಸಾರಿ ತಿಳಿಸಿದ್ದಾರೆ.
ʼಭ್ರಷ್ಟಾಚಾರʼ ಎಂಬುದು ಸರ್ಕಾರಿ ಅಧಿಕಾರಿಗಳ ರಕ್ತಕ್ಕೆ ನುಸುಳಿದೆ: ಮದ್ರಾಸ್ ಹೈಕೋರ್ಟ್ ಹೇಳಿಕೆ
“ನಾನು ನಿಮಗೆ ಮಾತು ಕೊಡುತ್ತೇನೆ, ಜಮ್ತಾರಾದ ರಸ್ತೆಗಳು ಚಿತ್ರ ನಟಿ ಕಂಗನಾ ರಣಾವತ್ ಕೆನ್ನೆಗಿಂತ ನುಣುಪಾಗಿ ಇರಲಿದ್ದು, ವಿಶ್ವ ದರ್ಜೆಯ 14 ರಸ್ತೆಗಳ ಕಾಮಗಾರಿ ಕೂಡಲೇ ಆರಂಭವಾಗಲಿದೆ,” ಎಂದು ಇರ್ಫಾನ್ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನಾ ಹಿರಿಯ ನಾಯಕ ಗುಲಾಬ್‌ರಾವ್ ಪಾಟೀಲ್, ತಮ್ಮ ಕ್ಷೇತ್ರದ ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗಳಿಗೆ ಹೋಲಿಸಿ ವಿವಾದಕ್ಕೆ ಸಿಲುಕಿದ್ದರು. ಈ ವಿಚಾರವಾಗಿ ರಾಜ್ಯ ಮಹಿಳಾ ಆಯೋಗದ ಕ್ಷಮೆಯಾಚಿಸಿದ್ದ ಸಚಿವರು ವಿವಾದ ತಣ್ಣಗೆ ಮಾಡಿದ್ದರು.
2005ರಲ್ಲಿ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಸಹ ಇಂಥದ್ದೇ ವಿವಾದದಲ್ಲಿ ಸಿಲುಕಿದ್ದರು. ಬಿಹಾರ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿ ಸದ್ದು ಮಾಡಿದ್ದರು ಲಾಲು ಪ್ರಸಾದ್ ಯಾದವ್. ಕಳೆದ ನವೆಂಬರ್‌ನಲ್ಲಿ, ರಾಜಸ್ಥಾನದ ನೂತನ ಸಚಿವ ರಾಜೇಂದ್ರ ಸಿಂಗ್ ಗುಢಾ ಕತ್ರಿನಾ ಕೈಫ್‌ರ ಕೆನ್ನೆಗಳನ್ನು ರಸ್ತೆಗಳ ಹೋಲಿಕೆಗೆ ಬಳಸಿದ್ದರು.