
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಅದೃಷ್ಟವಿದ್ದರೆ ಎಂತವುದೇ ಅಪಾಯ ಎದುರಾದರೂ ಸಹ ಸಾವಿನಿಂದ ಪಾರಾಗಬಹುದು ಎಂಬ ಸಂದೇಶವನ್ನು ನೀಡುವಂತಿದೆ ಈ ವಿಡಿಯೋ.
ರಾಜಸ್ಥಾನದ ರಾಜಸಮಂದ್ ನಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಬಾಲಕಿಯೊಬ್ಬಳು ನಿಂತಿದ್ದ ಕಾರಿನಲ್ಲಿ ಕುಳಿತಿರುತ್ತಾಳೆ. ಆಗ ಅವಳಿಗೆ ಏನನಿಸುತ್ತೋ ಏನೋ ಕಾರಿನಿಂದ ಕೆಳಗಿಳಿದು ಮುಂದೆ ಬಂದಿದ್ದಾಳೆ.
ಇದು ನಡೆದ ಕೇವಲ ಕೆಲವೇ ಸೆಕೆಂಡುಗಳ ಅಂತರದಲ್ಲಿ ಅತಿ ವೇಗವಾಗಿ ಬಂದ ವಾಹನವೊಂದು ನಿಂತಿದ್ದ ಕಾರಿನ ಮೇಲೆ ಬಿದ್ದಿದೆ. ಇದರ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.