alex Certify ಸಾಕು ಪ್ರಾಣಿಗಳನ್ನು ರೈಲಿನಲ್ಲಿ ಕೊಂಡೊಯ್ಯುವ ಮುನ್ನ ನಿಮಗಿದು ತಿಳಿದಿರಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ಪ್ರಾಣಿಗಳನ್ನು ರೈಲಿನಲ್ಲಿ ಕೊಂಡೊಯ್ಯುವ ಮುನ್ನ ನಿಮಗಿದು ತಿಳಿದಿರಲಿ…!

ಮುಂಬೈನಿಂದ ಭುವನೇಶ್ವರಕ್ಕೆ ಶ್ವಾನವೊಂದರ ರೈಲು ಪ್ರಯಾಣದ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ರಿಯೋ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಲ್ಯಾಬ್ರಡಾರ್ ಶ್ವಾನದ ಮುದ್ದಾದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಲ್ಯಾಬ್ರಡಾರ್ ನಾಯಿಯು ತನ್ನ ಮಾಲೀಕರೊಂದಿಗೆ ಮುಂಬೈನಿಂದ ಭುವನೇಶ್ವರಕ್ಕೆ ರೈಲು ಪ್ರಯಾಣ ಮಾಡಿದೆ. ಇದು ಖುಷಿಯಿಂದ ರೈಲು ಹತ್ತುವ, ಓಡಾಡುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಈ ನಾಯಿಯು ರೈಲು ಪ್ರಯಾಣವನ್ನು ಬಹಳ ಎಂಜಾಯ್ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಸದ್ಯ ಈ ವಿಡಿಯೋ ಸಾವಿರಾರು ನೆಟ್ಟಿಗರ ಹೃದಯಗೆದ್ದಿದೆ. ಅಕ್ಟೋಬರ್ 1 ರಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. “ಮುಂಬೈನಿಂದ ಭುವನೇಶ್ವರಕ್ಕೆ ನನ್ನ ಪ್ರಯಾಣ” ಎಂದು ಶೀರ್ಷಿಕೆ ನೀಡಲಾಗಿದೆ.

ರೈಲಿನಲ್ಲಿ ಸಾಕುಪ್ರಾಣಿಗಳ ಪ್ರಯಾಣದ ಬಗ್ಗೆ ಮಾಹಿತಿ:

ನಿಮ್ಮ ರೈಲು ಪ್ರಯಾಣದಲ್ಲಿ ನೀವು ಸಾಕುಪ್ರಾಣಿಗಳನ್ನು ಕೂಡ ಕರೆತರಬಹುದು. ಆದರೆ, ಕೆಲವೊಂದು ನಿಯಮಗಳಿವೆ.

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಜರ್ಮನ್ ಷಫರ್ಡ್, ಲ್ಯಾಬ್ರಡಾರ್‌ಗಳು ಮತ್ತು ಬಾಕ್ಸರ್‌ಗಳಂತಹ ಸಣ್ಣ ಅಥವಾ ದೊಡ್ಡ ನಾಯಿಗಳನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ. ಆದರೆ, ಸಾಕುಪ್ರಾಣಿಗಳಿಗೆ ಎಸಿ, ಪ್ರಥಮ ದರ್ಜೆಯಲ್ಲಿ ಮಾತ್ರ ಪ್ರಯಾಣಿಸಲು ಅವಕಾಶವಿದೆ.

ಇನ್ನು ನಾಯಿಯನ್ನು ರೈಲಿನಲ್ಲಿ ಕರೆದುಕೊಂಡು ಹೋಗಬೇಕೆಂದರೆ ಮತ್ತಷ್ಟು ಷರತ್ತುಗಳಿವೆ. ಇತರ ಪ್ರಯಾಣಿಕರನ್ನು ಹೊಂದಿರುವ ಕೂಪ್ ಅಥವಾ ವಿಭಾಗವನ್ನು ನಾಯಿ ಮಾಲೀಕರಿಂದ ಬುಕ್ ಮಾಡಲಾಗುವುದಿಲ್ಲ. ಅವರು ಇಡೀ ವಿಭಾಗವನ್ನು ರೈಲಿನಲ್ಲಿ ಕಾಯ್ದಿರಿಸಬೇಕಾಗುತ್ತದೆ.

ಸಣ್ಣ ನಾಯಿಗಳಿಗೆ ಪೆಟ್ಟಿಗೆಗಳನ್ನು ಇತರ ವಿಭಾಗಗಳಲ್ಲಿ ಇರಿಸಲಾಗುತ್ತದೆ. ಕನಿಷ್ಠ ಶುಲ್ಕವನ್ನು ಪಾವತಿಸುವ ಮೂಲಕ ಅವುಗಳನ್ನು ಬಳಸಬಹುದು.

ಸಾಕುಪ್ರಾಣಿಗಳಿಗೆ ಆಹಾರವನ್ನು ರೈಲಿನ ಅಡುಗೆಮನೆ ಒದಗಿಸುವುದಿಲ್ಲ. ಮಾಲೀಕರು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ.

ನಾಯಿಗಳು ಮತ್ತು ಇತರ ಜೀವಂತ ಪ್ರಾಣಿಗಳನ್ನು ಸಾಗಿಸಲು ಇತರ ನಿಯಮಗಳನ್ನು indianrail.gov.in ನಲ್ಲಿ ಪಟ್ಟಿ ಮಾಡಲಾಗಿದೆ. ನಾಯಿಗಳ ಸಾಗಣೆ ದರಗಳನ್ನು ಸಹ ವಿವರವಾಗಿ ಪಟ್ಟಿ ಮಾಡಲಾಗಿದೆ.

ಎಸಿ ಸ್ಲೀಪರ್ ಕೋಚ್, ಎಸಿ ಚೇರ್ ಕಾರ್ ಕೋಚ್, ಸ್ಲೀಪರ್ ಕ್ಲಾಸ್ ಮತ್ತು ಸೆಕೆಂಡ್ ಕ್ಲಾಸ್ ಕೋಚ್ ಗಳಲ್ಲಿ ನಾಯಿಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ. ಈ ನಿಯಮಕ್ಕೆ ವಿರುದ್ಧವಾಗಿ ನಾಯಿಯನ್ನು ಒಯ್ಯುವುದು ಕಂಡುಬಂದಲ್ಲಿ ಅದನ್ನು ತಕ್ಷಣವೇ ಬ್ರೇಕ್ ವ್ಯಾನ್ ಗೆ ತೆಗೆಯಲಾಗುತ್ತದೆ ಮತ್ತು ಶುಲ್ಕ ವಿಧಿಸಲಾಗುತ್ತದೆ. ಲಗೇಜ್ ಸ್ಕೇಲ್ ದರಕ್ಕಿಂತ ಆರು ಪಟ್ಟು ವಿಧಿಸಲಾಗುತ್ತದೆ. ಕನಿಷ್ಠ ರೂ.50 ಕ್ಕೆ ಒಳಪಟ್ಟಿರುತ್ತದೆ ಎಂದು ನಿಯಮ ಹೇಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...