alex Certify ಮನೆಯಿಂದ ಹೊರ ಹಾಕಲ್ಪಟ್ಟಿದ್ದವಳನ್ನು ಒಳಗೆ ಸೇರಿಸಲು ಬುಲ್ಡೋಜರ್ ತಂದ ಪೊಲೀಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಿಂದ ಹೊರ ಹಾಕಲ್ಪಟ್ಟಿದ್ದವಳನ್ನು ಒಳಗೆ ಸೇರಿಸಲು ಬುಲ್ಡೋಜರ್ ತಂದ ಪೊಲೀಸರು…!

ವರದಕ್ಷಿಣೆ ಕಾರಣಕ್ಕೆ ಮನೆಯಿಂದ ಹೊರಹಾಕಲ್ಪಟ್ಟ ಮಹಿಳೆಯನ್ನು ಮತ್ತೆ ಮನೆಯೊಳಗೆ ಸೇರಿಸಲು ಪೊಲೀಸರು ಬುಲ್ಡೋಜರ್ ತಂದ ಪ್ರಕರಣ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ. ನ್ಯಾಯಾಲಯದ ಆದೇಶದಂತೆ ಮಹಿಳೆಯನ್ನು ಮನೆಯೊಳಗೆ ಸೇರಿಸದಿದ್ದರೆ ಬುಲ್ಡೋಜರ್ ಹತ್ತಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ನೂತನ್ ಎಂಬ 30 ವರ್ಷದ ಮಹಿಳೆ ಹೆಚ್ಚಿನ ವರದಕ್ಷಿಣೆ ತಂದಿಲ್ಲವೆಂಬ ಕಾರಣಕ್ಕೆ ಆಕೆಯ ಗಂಡನ ಮನೆಯವರು ಮನೆಯಿಂದ ಹೊರ ಹಾಕಿದ್ದರು. ಇದರ ವಿರುದ್ಧ ಆಕೆ ಅಲಹಾಬಾದ್ ನ್ಯಾಯಾಲಯದ ಮೊರೆ ಹೋಗಿದ್ದು, ಮಹಿಳೆಯನ್ನು ಪತಿ ಮನೆಗೆ ಸೇರಿಸುವಂತೆ ಆದೇಶ ನೀಡಲಾಗಿತ್ತು.

ಆದರೆ ನೂತನ್ ಪತಿ ಮನೆಯವರು ಆಕೆಯನ್ನು ಸೇರಿಸಲು ಮೊಂಡಾಟ ನಡೆಸಿದ್ದು, ಆಗ ಪೊಲೀಸರು ಅನಿವಾರ್ಯವಾಗಿ ಬುಲ್ಡೋಜರ್ ತರಿಸಬೇಕಾಯಿತು. ಮನೆ ಬಾಗಿಲು ತೆರೆಯದಿದ್ದರೆ ಬುಲ್ಡೋಜರ್ ಬಳಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದು ಬಳಿಕ ನೂತನ್ ಗಂಡನ ಮನೆಯವರು ಆಕೆಯನ್ನು ಮನೆ ಒಳಗೆ ಸೇರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...