alex Certify ಮಿಸಿಸ್ಸಿಪ್ಪಿ ಶಾಲೆಗೆ ಅಪ್ಪಳಿಸಿದ ಚಂಡಮಾರುತ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಸಿಸ್ಸಿಪ್ಪಿ ಶಾಲೆಗೆ ಅಪ್ಪಳಿಸಿದ ಚಂಡಮಾರುತ; ವಿಡಿಯೋ ವೈರಲ್

VIDEO: Tornado damages Amory High Schoolಅಮೆರಿಕದ ಮಿಸಿಸ್ಸಿಪ್ಪಿ ಹಾಗೂ ಅಲಬಾಮಾ ರಾಜ್ಯಗಳನ್ನು ಅಕ್ಷರಶಃ ನಲುಗಿಸಿರುವ ಚಂಡಮಾರುತದ ಅಬ್ಬರಕ್ಕೆ 26 ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ, ಚಂಡಮಾರುತವು ಶಾಲೆಯೊಂದಕ್ಕೆ ಅಪ್ಪಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಿಸಿಸ್ಸಿಪ್ಪಿ ರಾಜ್ಯದಲ್ಲಿರುವ ಅಮೋರಿ ಪ್ರೌಢಶಾಲೆ ಈ ಚಂಡಮಾರುತಕ್ಕೆ ಪೀಡಿತವಾಗಿದ್ದು, ಶಾಲೆಯ ಐಟಿ ನಿರ್ದೇಶಕ ಸ್ಯಾಮ್ ಸ್ಟ್ರಿಕ್‌ಲ್ಯಾಂಡ್ ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ಶಾಲೆಯ ಆಸ್ತಿ ಪಾಸ್ತಿಗೆ ಹಾನಿಯಾಗಿದ್ದರೂ ಸಹ ದೀಪಗಳು ಉರಿಯುತ್ತಲೇ ಇದ್ದು, ಚಂಡಮಾರುತದಿಂದ ಆದ ಹಾನಿ ಯಾವ ಮಟ್ಟಿಗೆ ಇದೆ ಎಂದು ಕಣ್ಣಿಗೆ ಕಟ್ಟಿಕೊಟ್ಟಿವೆ.

ಚಂಡಮಾರುತಕ್ಕೆ ತುತ್ತಾದ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದಾರೆ.

— James Spann (@spann) March 25, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...