
ಮಿಸಿಸ್ಸಿಪ್ಪಿ ರಾಜ್ಯದಲ್ಲಿರುವ ಅಮೋರಿ ಪ್ರೌಢಶಾಲೆ ಈ ಚಂಡಮಾರುತಕ್ಕೆ ಪೀಡಿತವಾಗಿದ್ದು, ಶಾಲೆಯ ಐಟಿ ನಿರ್ದೇಶಕ ಸ್ಯಾಮ್ ಸ್ಟ್ರಿಕ್‌ಲ್ಯಾಂಡ್ ಈ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.
ಶಾಲೆಯ ಆಸ್ತಿ ಪಾಸ್ತಿಗೆ ಹಾನಿಯಾಗಿದ್ದರೂ ಸಹ ದೀಪಗಳು ಉರಿಯುತ್ತಲೇ ಇದ್ದು, ಚಂಡಮಾರುತದಿಂದ ಆದ ಹಾನಿ ಯಾವ ಮಟ್ಟಿಗೆ ಇದೆ ಎಂದು ಕಣ್ಣಿಗೆ ಕಟ್ಟಿಕೊಟ್ಟಿವೆ.
ಚಂಡಮಾರುತಕ್ಕೆ ತುತ್ತಾದ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದಾರೆ.