alex Certify ಅಬ್ಬಾ….! ಈ ಸಾಹಸಿ ಅಣ್ಣ-ತಂಗಿ ರಾತ್ರಿ ಕಳೆದಿದ್ದೆಲ್ಲಿ ಅಂತಾ ತಿಳಿದ್ರೆ ಮೈ ಜುಮ್ಮೆನ್ನುತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ….! ಈ ಸಾಹಸಿ ಅಣ್ಣ-ತಂಗಿ ರಾತ್ರಿ ಕಳೆದಿದ್ದೆಲ್ಲಿ ಅಂತಾ ತಿಳಿದ್ರೆ ಮೈ ಜುಮ್ಮೆನ್ನುತ್ತೆ

ಕೆಲವರಿಗೆ ನೀರು ಎಂದರೆ ಭಯ ಇನ್ನೂ ಕೆಲವರಿಗೆ ಎತ್ತರ ಎಂದರೆ ಭಯ. ಆದರೆ ಆಸ್ಟ್ರೇಲಿಯಾದ ಈ ಒಡಹುಟ್ಟಿದವರು ಮಾಡಿರುವ ಸಾಹಸವೊಂದು ಅಬ್ಬಬ್ಬಾ ಎನಿಸುವಂತೆ ಮಾಡಿದೆ.

ಆಸ್ಟ್ರೇಲಿಯಾದ 23 ವರ್ಷದ ಸ್ಯಾಮ್ ಸಿಮೊನ್ಸ್ ಮತ್ತು 19ರ ಹರೆಯದ ಆರಿಯಾನಾ ಸಿಮೊನ್ಸ್ ಹೆಸರಿನ ಅಣ್ಣ-ತಂಗಿ ಜೋಡಿ ಸಾಹಸದ ಟ್ರಿಪ್‌ಗಳೆಂದರೆ ಭಾರೀ ಇಷ್ಟ ಪಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಾಹಸದ ಅನೇಕ ಪೋಸ್ಟ್‌ಗಳನ್ನು ಈ ಜೋಡಿ ಹಂಚಿಕೊಂಡಿದೆ. ಈ ಬಾರಿ ತಮ್ಮ ಸಾಹಸವನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಈ ಅಣ್ಣ-ತಂಗಿ.

70 ಅಡಿ ಎತ್ತರದಲ್ಲಿ ನಿದ್ರೆ ಮಾಡುವ ಥ್ರಿಲ್ ಪಡೆಯಲು ಮುಂದಾದ ಈ ಅಣ್ಣ-ತಂಗಿ, ನ್ಯೂ ಸೌತ್‌ ವೇಲ್ಸ್‌‌ನಲ್ಲಿ 70 ಅಡಿ ಎತ್ತರದಲ್ಲಿ ಎರಡು ಗುಡ್ಡಗಳ ನಡುವೆ ಜೋಳಿಗೆಯೊಂದನ್ನು ಕಟ್ಟಿಕೊಂಡು ಒಂದಷ್ಟು ಕಾಲ ಕಳೆದಿದ್ದಾರೆ. ಸ್ಯಾಮ್ ಕಡಿದಾದ ಗುಡ್ಡದ ಮೇಲಿಂದ 3 ಮೀಟರ್‌ ಎತ್ತರದಲ್ಲಿದ್ದರೆ ಆರಿಯಾನಾ 10 ಮೀಟರ್‌ ಎತ್ತರದಲ್ಲಿದ್ದಳು. ಈ ಜೋಳಿಗೆಗಳ ಮೇಲೆ ಅಣ್ಣ-ತಂಗಿ ಒಂದಿಡೀ ರಾತ್ರಿ ಕಳೆದಿದ್ದಾರೆ.

ತಾನು ಹೀಗೆ ಮಾಡಬೇಕೆಂದು ಬಹಳಷ್ಟು ದಿನಗಳಿಂದ ಕನಸು ಕಾಣುತ್ತಿದ್ದುದ್ದಾಗಿ ಡೇಲಿ ಮೇಲ್‌ಗೆ ತಿಳಿಸಿದ ಸ್ಯಾಮ್, ಕೂಡಲೇ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಸೂಕ್ತವಾದ ಗುಡ್ಡವೂಂದರ ಹುಡುಕಾಟದಲ್ಲಿ ಭಾಗಿಯಾದರು.

70 ಅಡಿ ಎತ್ತರದಲ್ಲಿ ತಮ್ಮ ವಿಡಿಯೋಗಳು ಹಾಗೂ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಇಬ್ಬರೂ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...