alex Certify ಅಪ್ಘಾನಿಸ್ತಾನ ದುರಂತ: ಟೇಕಾಫ್​ ಆಗಿದ್ದ ವಿಮಾನದಿಂದ ಬಿದ್ದು ಇಬ್ಬರು ದಾರುಣ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಘಾನಿಸ್ತಾನ ದುರಂತ: ಟೇಕಾಫ್​ ಆಗಿದ್ದ ವಿಮಾನದಿಂದ ಬಿದ್ದು ಇಬ್ಬರು ದಾರುಣ ಸಾವು

ಅಪ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಬಳಿಕ ವಿವಿಧ ದೇಶಗಳು ತಮ್ಮ ನಾಗರಿಕರ ರಕ್ಷಣೆಗೆ ಮುಂದಾಗಿದೆ. ಕಾಬೂಲ್​ನಿಂದ ಹೊರಡುತ್ತಿದ್ದ ವಿಮಾನಗಳನ್ನು ಹತ್ತಲು ಜನರ ದಂಡೇ ಹರಿದು ಬರ್ತಿದ್ದ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದವು.

ಕಾಬೂಲ್​ನ ಹಮೀದ್​ ಕರ್ಜೈ ಅಂತಾರಾಷ್ಟ್ರೀಯ ವಿಮಾನದಲ್ಲಿ ಅವ್ಯವಸ್ಥೆ ಉಂಟಾದ ಹಿನ್ನೆಲೆಯಲ್ಲಿ ಎಲ್ಲಾ ನಾಗರಿಕ ವಿಮಾನಗಳನ್ನು ಸ್ಥಗಿತಗೊಳೊಸಲಾಗಿದೆ. ಇದರಿಂದ ಹತಾಶರಾಗಿದ್ದ ಇಬ್ಬರು ಪ್ರಯಾಣಿಕರು ರನ್​ವೇನಿಂದ ಟೇಕಾಫ್​ ಆಗುತ್ತಿದ್ದ ಮಿಲಿಟರಿ ವಿಮಾನದ ಚಕ್ರವನ್ನು ಹಿಡಿದುಕೊಂಡು ಹಾರಿದ್ದಾರೆ.

ಮಿಲಿಟರಿ ವಿಮಾನವು ಆಗಸದಲ್ಲಿ ಹಾರಾಟ ಆರಂಭಿಸುತ್ತಿದ್ದಂತೆಯೇ ಇಬ್ಬರೂ ಆಯತಪ್ಪಿ ಬಿದ್ದಿದ್ದು ಎದೆ ಝಲ್​ ಎನ್ನಿಸುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಆಯತಪ್ಪಿ ಬಿದ್ದಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಾಬೂಲ್​ನಿಂದ ತನ್ನ ಸಿಬ್ಬಂದಿ ಹಾಗೂ ನಾಗರಿಕರನ್ನು ಸಾಗಿಸುತ್ತಿದ್ದ ಅಮೆರಿಕ ವಾಯುಪಡೆ ವಿಮಾನದಿಂದ ಬಿದ್ದು ಇವರಿಬ್ಬರು ಸಾವನ್ನಪ್ಪಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...