ಬೆಕ್ಕಿನ ಜಾತಿಯು ಬೇಟೆಯಾಡುವ ವಿಚಾರದಲ್ಲಿ ಮಿಕ್ಕೆಲ್ಲಾ ಜೀವಿಗಳಿಗಿಂತ ಒಂದು ಕೈ ಮುಂದು. ಹುಲಿ, ಸಿಂಹ, ಚಿರತೆಗಳು ತಮ್ಮ ತೀಕ್ಷ್ಣತನದಿಂದ ಮಿಕಗಳಿಗೆ ಗೊತ್ತೇ ಆಗದಂತೆ ಹೇಗೆ ಬೇಟೆಯಾಡುತ್ತವೆ ಎಂದು ಬಹಳಷ್ಟು ವಿಡಿಯೋಗಳಲ್ಲಿ ನೋಡಿದ್ದೇವೆ.
ಮರದ ಮೇಲೆ ಕುಳಿತು ಜಿಂಕೆಗಳಿಗೆ ಹೊಂಚು ಹಾಕುತ್ತಿದ್ದ ಚಿರತೆಯೊಂದು ಅವಕಾಶ ಸಿಕ್ಕೊಡನೆಯೇ ಅದರ ಮೇಲೆ ಛಂಗೆಂದು ಹಾರಿ, ಜಿಂಕೆಯ ಕುತ್ತಿಗೆಗೆ ಬಾಯಿ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದೆ.
ಮರದ ಮೇಲಿಂದ ಹಾರುವ ಸಂದರ್ಭದಲ್ಲೂ ತನ್ನ ದೇಹದ ಮೇಲಿನ ಸಮತೋಲನವನ್ನು ಪರಿಪೂರ್ಣವಾಗಿ ಕಾಯ್ದುಕೊಳ್ಳುವ ಮೂಲಕ ಜಿಂಕೆಯನ್ನು ಅತ್ಯಂತ ಚಾಕಚಕ್ಯತೆಯಿಂದ ಬೇಟೆಯಾಡಿದೆ ಈ ಚಿರತೆ.
https://youtu.be/X_VCXMNiNhE