alex Certify ಒಮಿಕ್ರಾನ್‌ ಆತಂಕದ ಬೆನ್ನಲ್ಲೇ ಮತ್ತೊಂದು ಶಾಕ್: ಅತ್ಯಪರೂಪಕ್ಕೆ ಮಾನವನಲ್ಲಿ ಕಾಣಿಸಿಕೊಂಡ ಪಕ್ಷಿ ಜ್ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್‌ ಆತಂಕದ ಬೆನ್ನಲ್ಲೇ ಮತ್ತೊಂದು ಶಾಕ್: ಅತ್ಯಪರೂಪಕ್ಕೆ ಮಾನವನಲ್ಲಿ ಕಾಣಿಸಿಕೊಂಡ ಪಕ್ಷಿ ಜ್ವರ

ಬಹಳ ಅಪರೂಪದ ಪಕ್ಷಿ ಜ್ವರದ ಪ್ರಕರಣವೊಂದು ಇಂಗ್ಲೆಂಡ್‌ನ ನೈಋತ್ಯ ಭಾಗದಲ್ಲಿ ವಾಸಿಸುವ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಭದ್ರತಾ ಏಜೆನ್ಸಿ (ಯುಕೆಎಚ್‌ಎಸ್‌ಎ) ಘೋಷಿಸಿದೆ.

ಈ ವ್ಯಕ್ತಿ ತನ್ನ ಮನೆಯಲ್ಲಿ ಬಹಳ ದಿನಗಳಿಂದ ಸಾಕಿದ್ದ ದೊಡ್ಡ ಸಂಖ್ಯೆಯ ಪಕ್ಷಿಗಳಿಗೆ ತಗುಲಿದ ಸೋಂಕಿಂದ ತಾನೂ ಸೋಂಕಿತನಾಗಿದ್ದಾನೆ ಎಂದು ಏಜೆನ್ಸಿ ತಿಳಿಸಿದೆ.

‘ಕುಚ್ ಕುಚ್ ಹೋತಾ ಹೈ’ನಲ್ಲಿ ಕಾಜೋಲ್ ಧರಿಸಿದ್ದ ಹೆಡ್‌ಬ್ಯಾಂಡ್‍ ಹಿಂದಿನ ಗುಟ್ಟು ಈಗ ಬಹಿರಂಗ…!

“ಪಕ್ಷಿಗಳಿಂದ ಮಾನವರಿಗೆ ಸೋಂಕು ವರ್ಗಾವಣೆಯಾಗುವುದು ಅತ್ಯಪರೂಪವಾಗಿದ್ದು, ಈ ಹಿಂದೆ ಬ್ರಿಟನ್‌ನಲ್ಲಿ ಕೆಲವೇ ಬಾರಿ ಹೀಗೆ ಆಗಿದೆ,” ಎಂದು ಏಜೆನ್ಸಿ ಹೇಳಿಕೆಯೊಂದರ ಮೂಲಕ ತಿಳಿಸಿದೆ.

ಸೋಂಕಿತ ವ್ಯಕ್ತಿ ಸ್ವಯಂ ದಿಗ್ಬಂಧಿಯಾಗಿದ್ದು, ಆತನ ಎಲ್ಲಾ ಸಂಪರ್ಕಗಳನ್ನು ಪತ್ತೆ ಮಾಡಲಾಗಿದೆ. ಈತನಿಂದ ಬೇರೊಬ್ಬರಿಗೆ ಸೋಂಕು ಹಬ್ಬಿರುವುದು ಇದುವರೆಗೂ ಕಂಡು ಬಂದಿಲ್ಲ.

ಈ ಬಗ್ಗೆ ಮಾತನಾಡಿದ ಯುಕೆಎಚ್‌ಎಸ್‌ಎನಲ್ಲಿ ಮುಖ್ಯ ವೈಜ್ಞಾನಿಕ ಅಧಿಕಾರಿಯಾಗಿರುವ ಪ್ರೋಫೆಸರ್‌ ಇಸಾಬೆಲ್ ಒಲಿವರ್‌, “ಸಾಮಾನ್ಯ ಜನರಲ್ಲಿ ಏವಿಯನ್ ಜ್ವರದ ರಿಸ್ಕ್ ಕಡಿಮೆ ಇದ್ದರೂ ಸಹ, ಕೆಲವೊಂದು ಸ್ಟ್ರೇನ್‌ಗಳು ಮಾನವರಿಗೆ ಹಬ್ಬಬಲ್ಲವಾಗಿರುವ ಕಾರಣದಿಂದಾಗಿ ನಾವು ಈ ಸೋಂಕನ್ನು ಮೊದಲೇ ಪತ್ತೆ ಮಾಡಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ,” ಎಂದು ತಿಳಿಸಿದ್ದಾರೆ. ಈ ವಿಚಾರವನ್ನು ಬ್ರಿಟನ್‌ ಸರ್ಕಾರವು ವಿಶ್ವ ಸಂಸ್ಥೆಯ ಗಮನಕ್ಕೆ ತಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...