ಇನ್ನು ಪ್ರವೇಶ ಶುಲ್ಕವನ್ನು ಪಾವತಿಸಲು ಅಗತ್ಯವಿಲ್ಲದ ಮತ್ತೊಂದು ವರ್ಗದ ಸಂದರ್ಶಕರೆಂದರೆ ಹೋಟೆಲ್ ನಲ್ಲಿ ತಂಗುವ ಅತಿಥಿಗಳು. ಇವರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಏಕೆಂದರೆ ಅವರು ಈಗಾಗಲೇ ತಮ್ಮ ಹೋಟೆಲ್ ಮೂಲಕ ಪ್ರವಾಸಿ ತೆರಿಗೆಯನ್ನು ಪಾವತಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನ ಈ ವ್ಯವಸ್ಥೆಯನ್ನು ಉಲ್ಲಂಘಿಸುವವರಿಗೆ ದಂಡವನ್ನೂ ಸಹ ವಿಧಿಸಲಾಗುತ್ತದೆ. ಪ್ರವೇಶ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಪಾಲಿಸಲು ವಿಫಲರಾದರೆ, ಅವರಿಗೆ ರೂ. 4,100 ರಿಂದ ರೂ. 24,700 ವರೆಗೆ ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.