alex Certify ಅಂದದ ನಗರಿ ವೆನಿಸ್ ಗೆ ಹೋಗುವವರಿಗೆ ಇನ್ಮುಂದೆ ಪ್ರವೇಶ ಶುಲ್ಕ ಕಡ್ಡಾಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂದದ ನಗರಿ ವೆನಿಸ್ ಗೆ ಹೋಗುವವರಿಗೆ ಇನ್ಮುಂದೆ ಪ್ರವೇಶ ಶುಲ್ಕ ಕಡ್ಡಾಯ..!

ವೆನಿಸ್‌ ಅತ್ಯಂತ ಸುಂದರವಾದ ನಗರವಾಗಿದೆ. ಇಲ್ಲಿಗೆ ನಿತ್ಯ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ವೆನಿಸ್ ಗೆ ಭೇಟಿ ನೀಡುವ ಪ್ರವಾಸಿಗರು ಮುಂದಿನ ವರ್ಷ ಜನವರಿ 16 ರಿಂದ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹೌದು, ಜನದಟ್ಟಣೆ ಸಮಸ್ಯೆ ನಿವಾರಣೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಟಲಿಯ ಈ ನಗರವು ಇಂತಹ ಕ್ರಮಗಳನ್ನು ಕೈಗೊಂಡ ವಿಶ್ವದ ಮೊದಲ ನಗರವಾಗಿದೆ. ಇಟಲಿಯ ನಗರಕ್ಕೆ ಭೇಟಿ ನೀಡುವ ಮೊದಲು, ಜನರು ಸ್ಥಳವನ್ನು ಕಾಯ್ದಿರಿಸಬೇಕು ಮತ್ತು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಇದು ಸರಿಸುಮಾರು ರೂ. 250 ರಿಂದ ಪ್ರಾರಂಭವಾಗುತ್ತದೆ ಹಾಗೂ ಸುಮಾರು ರೂ.820 ರವರೆಗೆ ಇರಬಹುದು.

ಅಂದಹಾಗೆ, ವೆನಿಸ್‌ಗೆ ಆಗಮಿಸುವ ಎಲ್ಲಾ ಪ್ರವಾಸಿಗರಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಮಕ್ಕಳು ಮತ್ತು ವಿಕಲಚೇತನರಿಗೆ ಮೊತ್ತವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ. ಮನೆಮಾಲೀಕರು, ಆರೋಗ್ಯದ ಕಾರಣಗಳಿಗಾಗಿ ಭೇಟಿ ನೀಡುವ ಜನರು, ಸಂಬಂಧಿಕರನ್ನು ಭೇಟಿ ಮಾಡುವವರು ಮತ್ತು ಕ್ರೀಡಾ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಯಾಣಿಸುವ ಪ್ರವಾಸಿಗರಿಗೆ ಇದರಿಂದ ವಿನಾಯಿತಿ ನೀಡಲಾಗುತ್ತದೆ.

Venice Tourist Tax. Who's paying and how | The new Venice Tourist tax |

ಇನ್ನು ಪ್ರವೇಶ ಶುಲ್ಕವನ್ನು ಪಾವತಿಸಲು ಅಗತ್ಯವಿಲ್ಲದ ಮತ್ತೊಂದು ವರ್ಗದ ಸಂದರ್ಶಕರೆಂದರೆ ಹೋಟೆಲ್ ನಲ್ಲಿ ತಂಗುವ ಅತಿಥಿಗಳು. ಇವರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಏಕೆಂದರೆ ಅವರು ಈಗಾಗಲೇ ತಮ್ಮ ಹೋಟೆಲ್ ಮೂಲಕ ಪ್ರವಾಸಿ ತೆರಿಗೆಯನ್ನು ಪಾವತಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನ ಈ ವ್ಯವಸ್ಥೆಯನ್ನು ಉಲ್ಲಂಘಿಸುವವರಿಗೆ ದಂಡವನ್ನೂ ಸಹ ವಿಧಿಸಲಾಗುತ್ತದೆ. ಪ್ರವೇಶ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಪಾಲಿಸಲು ವಿಫಲರಾದರೆ, ಅವರಿಗೆ ರೂ. 4,100 ರಿಂದ ರೂ. 24,700 ವರೆಗೆ ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.

Exclusive: Venice u-turns on overtourism tax this summer despite record visitor numbers | Euronews

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...