ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಬಾಂಧವ್ಯ ವರ್ಣನಾತೀತ. ಈ ಸಂಬಂಧ ಪದಗಳಲ್ಲಿ ಹೇಳಲಾಗುವುದಿಲ್ಲ. ಅದು ಇನ್ನಷ್ಟು ಬಲಗೊಳ್ಳುವುದು ಅಥವಾ ಪ್ರೀತಿಯ ಅರಿವಾಗುವುದು ಅವರು ದೂರ ಉಳಿದಾಗ. ಇದೀಗ ವೈರಲ್ ಆಗಿರುವ ಅಜ್ಜಿ, ಮೊಮ್ಮಗನ ಸಂಬಂಧದ ಕುರಿತು ಬಹಳ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ವೆನೆಜುವೆಲಾದ ಫುಟ್ಬಾಲ್ ಆಟಗಾರನ ಘಟನೆ ಇದಾಗಿದೆ. ಪೋರ್ಚುಗಲ್ನಲ್ಲಿ ವೃತ್ತಿಪರವಾಗಿ ಆಡಿದ ವೆನೆಜುವೆಲಾದ ಸಾಕರ್ ಆಟಗಾರನ ಭಾವನಾತ್ಮಕ ಕ್ಷಣಗಳನ್ನು ಒಳಗೊಂಡಿರುವ ಕ್ಲಿಪ್ ಅನ್ನು ಗುಡ್ ನ್ಯೂಸ್ ಮೂವ್ಮೆಂಟ್ ಹಂಚಿಕೊಂಡಿದೆ.
ಈ ಆಟಗಾರ ಆಡುವ ಸಮಯದಲ್ಲಿ ದೂರದಲ್ಲಿ ಅಜ್ಜಿ ನಿಂತು ಆತನನ್ನು ಹುರಿದುಂಬಿಸುತ್ತಿರುತ್ತಾರೆ. ಅಜ್ಜಿ ಅಚಾನಕ್ ಆಗಿ ಬಂದದ್ದನ್ನು ನೋಡಿದ ಆಟಗಾರ ಭಾವಪರವಶನಾಗಿ ಓಡೋಡಿ ಹೋಗಿ ಆಕೆಯನ್ನು ತಬ್ಬಿಕೊಳ್ಳುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಅಜ್ಜಿಯನ್ನು ಕಂಡು ಆಟಗಾರ ಕಣ್ಣೀರಾಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದು ಹೃದಯಸ್ಪರ್ಶಿ ವಿಡಿಯೋ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಬಹಳ ಸಮಯದ ನಂತರ ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವ ಸಂತೋಷವು ತುಂಬಾ ವಿಶೇಷವಾಗಿದೆ ಮತ್ತು ಈ ಫುಟ್ಬಾಲ್ ಆಟಗಾರನ ಪ್ರತಿಕ್ರಿಯೆಗಳ ಅದನ್ನು ತೋರಿಸುತ್ತದೆ ಎಂದು ಬಣ್ಣಿಸಿದ್ದಾರೆ.