ಇಲ್ಲಿಯವರೆಗೆ ಆಮೆಗಳನ್ನು ಸಸ್ಯಹಾರಿ ಅಂತಾನೇ ಕರೆಯಲಾಗುತ್ತಿತ್ತು. ಆದರೆ, ಈ ಆಮೆಯೊಂದರ ವಿಡಿಯೋ ನೋಡಿದ್ರೆ, ಇದೇನು ಸಸ್ಯಾಹಾರದಿಂದ ಮಾಂಸಾಹಾರ ಸೇವನೆಗೆ ಮುಂದಾಗಿದೆಯೇ ಎಂಬ ಪ್ರಶ್ನೆ ಮೂಡುವುದು ಸುಳ್ಳಲ್ಲ. ಕೇಂಬ್ರೀಡ್ಜ್ ವಿಶ್ವವಿದ್ಯಾನಿಲಯವು ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ದೈತ್ಯ ಆಮೆಯು ಮರಿ ಹಕ್ಕಿಯ ಮೇಲೆ ದಾಳಿ ಮಾಡುವ ಅನಿರೀಕ್ಷಿತ ಕ್ಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
BREAKING: ಭಾರತೀಯ ವಾಯುಸೇನೆಗೆ ಸೇರಿದ ಯುದ್ಧ ವಿಮಾನ ಪತನ
2020ರ ಜುಲೈನಲ್ಲಿ ಫ್ರೀಗೇಟ್ ದ್ವೀಪದಲ್ಲಿ ತೆಗೆದಿರುವ ಈ ವಿಡಿಯೋದಲ್ಲಿ ದೈತ್ಯ ಹೆಣ್ಣು ಆಮೆಯೊಂದು ಮರದ ದಿಮ್ಮಿಯಲ್ಲಿದ್ದ ಮರಿ ಹಕ್ಕಿಯನ್ನು ಹಿಂಬಾಲಿಸಿದೆ. ಭಯದಿಂದ ಹಿಂದೆ ಹಿಂದೆ ಹೋದ ಹಕ್ಕಿಯು ಮರದ ದಿಮ್ಮಿಯ ತುದಿಯಲ್ಲಿ ನಿಲ್ಲುತ್ತದೆ. ಅದರ ಕಡೆ ಚಲಿಸಿ ಪುಟ್ಟ ಹಕ್ಕಿಯ ತಲೆ ಬಿಗಿಯುತ್ತದೆ. ಇದರಿಂದ ಹಕ್ಕಿ ನೆಲದ ಮೇಲೆ ಬೀಳುತ್ತದೆ. ಆಮೆಯು ತನ್ನ ಆಹಾರವನ್ನು ತಿನ್ನುತ್ತದೆ.
ಪ್ರಸ್ತುತ ಜೀವಶಾಸ್ತ್ರ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧವು, “ಸೀಶೆಲ್ಸ್ ದೈತ್ಯ ಆಮೆ ಜೀವಂತ ಹಕ್ಕಿಯನ್ನು ತಿನ್ನುವುದು ಯಾವುದೇ ಆಮೆ ಜಾತಿಗಳಲ್ಲಿ ಉದ್ದೇಶಪೂರ್ವಕವಾಗಿ ಬೇಟೆಯಾಡಿದ್ದು ಇದೇ ಮೊದಲು” ಎಂದು ಬಹಿರಂಗಪಡಿಸಿದೆ.