alex Certify ಕೀಲುನೋವಿನ ಸಮಸ್ಯೆ ಹೊಂದಿದ್ದ ದೈತ್ಯ ಆಮೆಗೆ ಯಶಸ್ವಿ ಚಿಕಿತ್ಸೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೀಲುನೋವಿನ ಸಮಸ್ಯೆ ಹೊಂದಿದ್ದ ದೈತ್ಯ ಆಮೆಗೆ ಯಶಸ್ವಿ ಚಿಕಿತ್ಸೆ..!

ಇದು ನೋಡೋಕೆ ನಿಮಗೆ ವಿಚಿತ್ರ ಎನಿಸಬಹುದು. ಆದರೆ ಜರ್ಮನಿಯಲ್ಲಿರುವ ಈ ದೈತ್ಯ ಆಮೆ ರೋಲರ್​ ಬೋರ್ಡ್​ನಲ್ಲಿ ಓಡಾಡುವ ಮೂಲಕವೇ ಸುದ್ದಿಯಾಗಿದೆ.

ಅಂದಹಾಗೆ ಮನರಂಜನೆಗಾಗಿ ಆಮೆಗೆ ಈ ರೋಲರ್​ ಬೋರ್ಡ್​ನ್ನು ನೀಡಲಾಗಿಲ್ಲ. ಆದರೆ ಇದಕ್ಕೆ ದೈತ್ಯ ಚಿಪ್ಪನ್ನ ಹೊರೋದು ಕಷ್ಟವಾಗಿದ್ದರಿಂದ ವೈದ್ಯರು ಈ ರೀತಿ ಮಾಡಿದ್ದಾರೆ.

23 ವರ್ಷದ ಹೆಲ್ಮುತ್​ ಹೆಸರಿನ ಈ ಗಂಡು ಆಮೆ ಬರೋಬ್ಬರಿ 100 ಕೆಜಿ ತೂಕವನ್ನ ಹೊಂದಿದೆ. ಅಲ್ಲದೇ ಈ ಆಮೆಯು ಕಳೆದ ಕೆಲ ದಿನಗಳಿಂದ ಕೀಲುನೋವಿನ ಸಮಸ್ಯೆಯಿಂದ ಬಳಲುತ್ತಿತ್ತು.

ಜರ್ಮನಿಯ ನಾರ್ತ್​ ರೈನ್​​ ವೆಸ್ಟ್ಪಾಲಿಯಾದಲ್ಲಿರುವ ಜೂಮ್​​ ಎರ್ಲೆಬ್​​ನಿಸ್ವೆಲ್ಟ್​​ ಜೆಲ್ಸೆನ್​ಕಿರ್ಚೆನ್​​ ನಲ್ಲಿ ಈ ದೈತ್ಯ ಆಮೆಗೆ ಚಿಕಿತ್ಸೆಯನ್ನ ನೀಡಲಾಗ್ತಿದೆ. ಈ ಆಮೆಯ ಮುಂದಿನ ಕಾಲುಗಳಲ್ಲಿ ಸಮಸ್ಯೆಗಳಿದ್ದು ಇದೀಗ ರೋಲರ್​ ಬೋರ್ಡ್​ ಮೂಲಕ ಓಡಾಡುತ್ತಿದೆ. ಈ ವಿಡಿಯೋವನ್ನ ಮೃಗಾಲಯವು ತನ್ನ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿದೆ.

ಹೆಲ್ಮುತ್​ ತನ್ನ ಭುಜದ ಕೀಲುಗಳಲ್ಲಿ ಅದರಲ್ಲೂ ವಿಶೇಷವಾಗಿ ಬಲಭಾಗದಲ್ಲಿ ಸಮಸ್ಯೆಯನ್ನ ಹೊಂದಿತ್ತು. ಇದಕ್ಕೆ ದೀರ್ಘಾವಧಿ ತರಬೇತಿಯ ಅವಶ್ಯಕತೆ ಇದೆ. ಹೆಲ್ಮುತ್​ ಕೂಡ ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿದ್ದಾನೆ ಎಂದು ಮೃಗಾಲಯದ ವಕ್ತಾರ ಹೇಳಿದ್ದಾರೆ.

Spornschildkröte Helmuth bei der Physiotherapie

Spornschildkröte Helmuth bekommt momentan täglich Physiotherapie. Dabei wird das 100 kg schwere Tier von zwei starken Mitarbeitern auf ein Rollbrett gesetzt und bewegt sich damit selbstständig vorwärts. Grund ist, dass er Veränderungen an den Schultergelenken hat. Durch die Beeinträchtigung verharrte er oft in einer Schonhaltung und verwendete vor allem sein rechtes Vorderbein nur noch eingeschränkt. Damit er durch die Schonhaltung nicht die Muskeln in allen Beinen verliert und weiterhin in der Lage ist, seinen Panzer eigenständig zu stemmen, trainiert er nun regelmäßig mit Hilfe des Rollbretts. Der Therapie- und Medikamentenplan für Helmuth wurde in Absprache mit Reptilienexperten entwickelt und wir erhoffen uns in nächster Zeit Besserung für ihn. Für die Diagnose seiner Schultergelenksprobleme wurde Helmuth übrigens letzte Woche in dem Computertomographen der Tierklinik Telgte untersucht, das normalerweise für Pferde verwendet wird. Wegen seines breiten Panzers war es sehr schwierig, ein passendes CT zu finden. Den Transport und die Untersuchung hat er sehr gut überstanden. Fotos davon findet ihr auf der Facebook-Seite von der Tierklinik.

Posted by ZOOM Erlebniswelt Gelsenkirchen on Wednesday, March 31, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...