ಎಲ್ಲರಿಗೂ ತಮ್ಮ ಮನೆಯ ವಾತಾವರಣ ಫ್ರೆಶ್ ಆಗಿ ಸುಗಂಧಭರಿತವಾಗಿ ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿ ವಾತಾವರಣ ಇದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.
ಇದಕ್ಕಾಗಿ ಅನೇಕರು ಮಾರುಕಟ್ಟೆಗಳಲ್ಲಿ ಸಿಗುವ ರೂಮ್ ಫ್ರೆಶ್ನರ್ಗಳು ಹಾಗೂ ಪರ್ಫ್ಯುಮ್ಗಳನ್ನು ಬಳಕೆ ಮಾಡುತ್ತಾರೆ. ಆದರೆ ಇದರಿಂದ ಸಿಗುವ ಪರಿಮಳವು ಹೆಚ್ಚು ಕಾಲ ಇರೋದಿಲ್ಲ. ಹೀಗಾಗಿ ಸುಗಂಧವನ್ನು ಕಾಪಾಡಿಕೊಳ್ಳಲು ನೀವು ಪದೇ ಪದೇ ರೂಮ್ ಫ್ರೆಶ್ನರ್ಗಳನ್ನು ಬಳಕೆ ಮಾಡುತ್ತಲೇ ಇರಬೇಕು. ಆದರೆ ನೀವು ಮಾರುಕಟ್ಟೆಯಲ್ಲಿ ಹಣವನ್ನು ವ್ಯರ್ಥ ಮಾಡದೇ ಮನೆಯಲ್ಲೇ ಇರುವ ವಸ್ತುಗಳನ್ನು ಬಳಕೆ ಮಾಡಿ ದೀರ್ಘ ಕಾಲದ ಸುಗಂಧ ಮನೆಯಲ್ಲಿ ನೆಲೆಸುವಂತೆ ಮಾಡಬಹುದು.
ಇದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ. ಬೆಳಗ್ಗೆ ಎದ್ದ ಕೂಡಲೇ ಮನೆಯ ಗಾರ್ಡನ್ನಲ್ಲಿ ಸಿಗುವ ಗುಲಾಬಿ ಹೂವುಗಳನ್ನ ಕೊಯ್ದು ಅದರ ಪಕಳೆಗಳನ್ನು ಒಂದು ಗಾಜಿನ ಪಾತ್ರೆಗೆ ಹಾಕಿ. ಇದಕ್ಕೆ ಸ್ವಚ್ಛವಾದ ನೀರನ್ನು ಹಾಕಿ. ಇದನ್ನು ಗಾಳಿ ಸರಿಯಾಗಿ ಬರುವ ಜಾಗದಲ್ಲಿ ಇರಿಸಿ. ಈ ರೀತಿ ಮಾಡೋದ್ರಿಂದ ಇಡೀ ದಿನ ನಿಮ್ಮ ಮನೆಯಲ್ಲಿ ಗುಲಾಬಿ ಹೂವಿನ ಸುಗಂಧ ಪಸರಿಸಲಿದೆ.