alex Certify ‘ವ್ಯಾಲೆಂಟೈನ್ಸ್​ ಡೇ’ ಪ್ರಯುಕ್ತ ರಫ್ತಾದ ಗುಲಾಬಿ ಹೂಗಳೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವ್ಯಾಲೆಂಟೈನ್ಸ್​ ಡೇ’ ಪ್ರಯುಕ್ತ ರಫ್ತಾದ ಗುಲಾಬಿ ಹೂಗಳೆಷ್ಟು ಗೊತ್ತಾ…?

ಈ ವರ್ಷದ ವ್ಯಾಲೆಂಟೈನ್​ ಡೇ ಪ್ರಯುಕ್ತ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಎರಡು ಪಟ್ಟು ಹೆಚ್ಚು ಗುಲಾಬಿ ಸಾಗಣೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವ್ಯಾಲೆಂಟೈನ್ಸ್​ ಸೀಸನ್​ನಲ್ಲಿ ಗುಲಾಬಿ ಹೂವಿಗೆ ಬೇಡಿಕೆಯು ದೇಶಿ ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎನ್ನಲಾಗಿದೆ. ಬೆಂಗಳೂರು ಏರ್​ಪೋರ್ಟ್​ನಿಂದ 25 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದೇಶಿ ವಿಮಾನ ನಿಲ್ದಾಣಗಳಿಗೆ ಸರಿ ಸುಮಾರು 5.15 ಲಕ್ಷ ಕೆಜಿ ಗುಲಾಬಿ ಹೂವುಗಳನ್ನು ಸಾಗಿಸಲಾಗಿದೆ. ಕಳೆದ ವರ್ಷದಲ್ಲಿ 2.7 ಲಕ್ಷ ಕೆಜಿ ಗುಲಾಬಿ ಹೂವುಗಳನ್ನು ಸಾಗಣೆ ಮಾಡಲಾಗಿತ್ತು ಎನ್ನಲಾಗಿದೆ.

ದೇಶಿ ಮಾರುಕಟ್ಟೆಗಳಲ್ಲಿ ವ್ಯಾಲೆಂಟೈನ್​ ಸೀಸನ್​ ಪ್ರಯುಕ್ತ ಗುಲಾಬಿ ಹೂವುಗಳ ಬೇಡಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನೀಡಿದ ಈ ಮಾಹಿತಿಯನ್ನು ಆಧರಿಸಿ ಅಂದಾಜಿಸಬಹುದಾಗಿದೆ.

ದೇಶಿ ಸಾಗಣೆಯಲ್ಲಿ ಈ ಬಾರಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ. ಕಳೆದ ವರ್ಷ ದೇಶಿ ಮಾರುಕಟ್ಟೆಗೆ 1.03 ಲಕ್ಷ ಕೆಜಿ ಗುಲಾಬಿ ಹೂವು ಸಾಗಣೆಯಾಗಿತ್ತು. ಆದರೆ ಈ ವರ್ಷ ಇದು 3.15 ಲಕ್ಷ ಕೆಜಿಗೆ ಏರಿಕೆ ಕಂಡಿದೆ. ಅಂದರೆ 200 ಪ್ರತಿಶತದಷ್ಟು ಬೆಳವಣಿಗೆಯನ್ನು ನಾವು ಗಮನಿಸಬಹುದಾಗಿದೆ. ಇನ್ನು ಅಂತಾರಾಷ್ಟ್ರೀಯ ನಿಲ್ದಾಣಗಳಿಗೆ ಕಳೆದ ವರ್ಷ 1.7 ಲಕ್ಷ ಕೆಜಿ ಗುಲಾಬಿ ಹೂವನ್ನು ರಫ್ತು ಮಾಡಲಾಗಿತ್ತು. ಆದರೆ ಈ ಬಾರಿ ಇದು 2 ಲಕ್ಷ ಕೆಜಿಗೆ ಏರಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...