alex Certify Rain Alert Karnataka : ದಸರಾ ಸಂಭ್ರಮಕ್ಕೆ ವರುಣನ ಅಡ್ಡಿ : ಮುಂದಿನ 2 ದಿನ ಭಾರಿ ‘ಮಳೆ’ ಮುನ್ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Rain Alert Karnataka : ದಸರಾ ಸಂಭ್ರಮಕ್ಕೆ ವರುಣನ ಅಡ್ಡಿ : ಮುಂದಿನ 2 ದಿನ ಭಾರಿ ‘ಮಳೆ’ ಮುನ್ಸೂಚನೆ

ಬೆಂಗಳೂರು : ದಸರಾ ಸಂಭ್ರಮಕ್ಕೆ ವರುಣ ಅಡ್ಡಿಯಾಗುವ ಸಾಧ್ಯತೆಯಿದ್ದು, ಮುಂದಿನ 2  ದಿನ ಭಾರಿ ‘ಮಳೆ’ ಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹೌದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ವರುಣ ಅಬ್ಬರಿಸಲಿದ್ದಾನೆ. ನಾಳೆ ಸೋಮವಾರ ಹಾಗೂ ಮಂಗಳವಾರ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 2 ದಿನ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಇನ್ನೂ ಬೆಂಗಳೂರಿನಲ್ಲೂ ಸಂಜೆ ಅಥವಾ ರಾತ್ರಿ ಮಳೆಯಾಗಲಿದೆ. ಅದೇ ರೀತಿ ಹಾಸನ, ಚಿಕ್ಕಮಗಳೂರು, , ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕೊಡಗು , ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎನ್ನಲಾಗಿದೆ.ಮುಂದಿನ ವಾರ ಅಂದರೆ ಅಕ್ಟೋಬರ್ ತಿಂಗಳ ಕೊನೆವರೆಗೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...