alex Certify ತಮ್ಮ ಮುದ್ದಿನ ಶ್ವಾನವನ್ನು ಅಪ್ಪಿ ಮುದ್ದಾಡುವ ಬಾಲಿವುಡ್ ಸೆಲೆಬ್ರಿಟಿಗಳು: ಇಲ್ಲಿವೆ ಫೋಟೋಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಮುದ್ದಿನ ಶ್ವಾನವನ್ನು ಅಪ್ಪಿ ಮುದ್ದಾಡುವ ಬಾಲಿವುಡ್ ಸೆಲೆಬ್ರಿಟಿಗಳು: ಇಲ್ಲಿವೆ ಫೋಟೋಗಳು

ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಪ್ರತಿವರ್ಷ ಆಗಸ್ಟ್ 26ರಂದು ಆಚರಿಸಲಾಗುತ್ತದೆ. ಸೆಲೆಬ್ರೆಟಿಗಳು ಕೂಡ ಶ್ವಾನವನ್ನು ಪ್ರೀತಿಯಿಂದ ಸಾಕುತ್ತಾರೆ. ತಮ್ಮ ಮನೆಯ ಸದಸ್ಯನಂತೆಯೇ ಕಾಣುತ್ತಾರೆ. ಹಾಗೆಯೇ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಕೆಲ ಬಾಲಿವುಡ್ ಸೆಲೆಬ್ರಿಟಿಗಳು ಹಂಚಿಕೊಂಡಿರುವ ಫೋಟೋ ಝಲಕ್ ಇಲ್ಲಿದೆ.

ವರುಣ್ ಧವನ್:

ಬಾಲಿವುಡ್ ನಟ ವರುಣ್ ಧವನ್ ಗೆ ನಾಯಿಗಳೆಂದ್ರೆ ಅಚ್ಚುಮೆಚ್ಚು. ತಾವು ಕೂಡ ಶ್ವಾನವನ್ನು ಸಾಕುತ್ತಿದ್ದು, ಅದರ ಜೊತೆ ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಸಕ್ರಿಯರಾಗಿರುವ ಇವರು ತನ್ನ ಮುದ್ದಾದ ನಾಯಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

ಪ್ರಿಯಾಂಕ ಚೋಪ್ರಾ:

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಕೂಡ ನಾಯಿ ಅಂದ್ರೆ ಭಾರಿ ಪ್ರೀತಿ. ಇವರು ತಮ್ಮ ಮುದ್ದಾದ ನಾಯಿಯ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಇದರ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಾಯಿಗೆ ವಿಧ-ವಿಧವಾದ ಉಡುಗಳನ್ನು ಹಾಕಿ ಫೋಟೋಶೂಟ್ ಮಾಡಿಸಿದ್ದಾರೆ.

ಸ್ವರ ಭಾಸ್ಕರ್:

ಸ್ವರ ಭಾಸ್ಕರ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ತನ್ನ ಪ್ರೀತಿಯ ನಾಯಿಯ ಫೋಟೋ ಹಂಚಿಕೊಳ್ಳುತ್ತಾರೆ. ಸೆಲ್ಫಿಗಳು ಹಾಗೂ ಫೋನ್ ಕ್ಯಾಮರಾಗಳನ್ನು ಇವರು ದ್ವೇಷಿಸುತ್ತಾರಂತೆ. ಆದರೆ ಕ್ಯಾಮರಾಗೆ ಇವರ ಮುದ್ದಿನ ನಾಯಿ ಗೋಡೋಟ್ ನೀಡುವ ಫೋಸ್ ಅನ್ನು ಖುಷಿಯಿಂದ ಹಂಚಿಕೊಳ್ಳುತ್ತಾರೆ. ತನ್ನ ಗಂಡು ಮಗುವೆಂದೇ ಹೇಳಿಕೊಳ್ಳುತ್ತಾರೆ.

ಶ್ರದ್ಧಾ ಕಪೂರ್:

ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ಇವರು ಆಗಾಗ್ಗೆ ತಮ್ಮ ಮುದ್ದಿನ ಶ್ವಾನದ ಫೋಟೋ ಪೋಸ್ಟ್ ಮಾಡುತ್ತಿರುತ್ತಾರೆ. ಸಾಕು ಪ್ರಾಣಿ ಹಾಗೂ ಮನುಷ್ಯನ ನಡುವಿನ ಪ್ರೀತಿಯ ಬಾಂಧವ್ಯವನ್ನು ಇವರ ಫೋಟೋದಲ್ಲಿ ಕಾಣಬಹುದಾಗಿದೆ.

ಸೊನಾಲಿ ಬೇಂದ್ರೆ:

ತನ್ನ ಮುದ್ದಿನ ನಾಯಿಯನ್ನು ಅಪ್ಪಿಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಸೊನಾಲಿ ಬೇಂದ್ರೆ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ನೋಡುತ್ತಿದ್ದರೆ ನಿಮಗೂ ನಿಮ್ಮ ನಾಯಿಯನ್ನು ಅಪ್ಪಿ ಹಿಡಿಯಬೇಕು ಎಂದೆನಿಸಬಹುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...