alex Certify ಈ ಹೆಗ್ಗಳಿಕೆಗೆ ಪಾತ್ರವಾಗಲಿದೆ ಪ್ರಧಾನಿ ಮೋದಿ ಪ್ರತಿನಿಧಿಸುವ ʼವಾರಣಾಸಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹೆಗ್ಗಳಿಕೆಗೆ ಪಾತ್ರವಾಗಲಿದೆ ಪ್ರಧಾನಿ ಮೋದಿ ಪ್ರತಿನಿಧಿಸುವ ʼವಾರಣಾಸಿʼ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ಸಂಸದೀಯ ಕ್ಷೇತ್ರವಾದ ವಾರಣಸಿಯು ದೇಶದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ರೋಪ್‌ವೇ ಪರಿಚಯಿಸಿದ ನಗರವಾಗಲಿದೆ.

ನಗರದ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಿಂದ ಗೊದೌಲಿಯಾವರೆಗೂ ದೇಶದ ಮೊದಲ ಸಾರ್ವಜನಿಕ ರೋಪ್‌ವೇ ನಿರ್ಮಿಸುವ ಸಂಬಂಧ ಯೋಜನೆಗಳು ಸಿದ್ಧಗೊಂಡಿವೆ. ಹೀಗಾದಲ್ಲಿ, ಈ ರೀತಿಯ ಸಾರಿಗೆ ವ್ಯವಸ್ಥೆ ಹೊಂದಿದ ಜಗತ್ತಿನ ಮೂರನೇ ನಗರ ವಾರಣಾಸಿಯಾಗಲಿದೆ.

424 ಕೋಟಿ ರೂ.ಗಳ ಈ ರೋಪ್‌ವೇ ಯೋಜನೆ ಮೂಲಕ ಕಾಶಿ ವಿಶ್ವನಾಥ ದೇಗುಲ ಹಾಗೂ ದಶಾಶ್ವಮೇಧ ಘಾಟ್‌ಗಳು ಇನ್ನಷ್ಟು ಸುಲಭವಾಗಿ ತಲುಪಬಹುದಾಗಿದೆ.

‘ವಾಸ್ತು ದೋಷ’ ನಿವಾರಣೆ ಮಾಡುತ್ತೆ ಈ ಟಿಪ್ಸ್

4.2 ಕಿಮೀಗಳ ದೂರವನ್ನು ಕ್ರಮಿಸಲಿರುವ ಈ ರೋಪ್‌ವೇ ಪ್ರವಾಸಿಗರಿಗೆ ಬಹಳಷ್ಟು ಸಮಯ ಹಾಗೂ ದುಡ್ಡು ಉಳಿಸಲಿದೆ. ಜಗತ್ತಿನ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ವಾರಣಾಸಿಯ ಸಂಚಾರ ದಟ್ಟಣೆಯ ಕಿರಿಕಿರಿಯಿಲ್ಲದೇ ನಗರವನ್ನೆಲ್ಲಾ ಪ್ರದಕ್ಷಿಣೆ ಹಾಕಬಹುದಾಗಿದೆ.

“ಬೊಲಿವಿಯಾ ಹಾಗೂ ಮೆಕ್ಸಿಕೋ ನಗರಗಳ ಬಳಿಕ ರೋಪ್‌ವೇಯನ್ನು ಸಾರ್ವಜನಿಕ ಸಾರಿಗೆಯನ್ನಾಗಿ ಪರಿಚಯಿಸುತ್ತಿರುವ ಜಗತ್ತಿನ ಮೂರನೇ ನಗರ ವಾರಣಾಸಿಯಾಗಿದೆ. ಈ ಪೈಲಟ್‌ ಯೋಜನೆಯನ್ನು ಜಪಾನ್‌ನ ಕ್ಯೋಟೋದಲ್ಲಿಯಂತೆ ಸುವ್ಯಸ್ಥಿತವಾಗಿ ಅಭಿವೃದ್ಧಿಪಡಿಸಲಾಗಿದೆ. ರೋಪ್‌ವೇಯ ನಿಲ್ದಾಣಗಳು ವಾರಣಾಸಿಯ ಪರಂಪರೆಯನ್ನು ಬಿತ್ತರಿಸುವಂತೆ ಇವೆ,” ಎಂದು ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದ ಉಪ-ಚೇರ್ಮನ್ ಇಶಾ ದುಹಾನ್ ತಿಳಿಸಿದ್ದಾರೆ.

ರೋಗಿ ಹೊಟ್ಟೆಯೊಳಗಿದ್ದ ವಸ್ತುಗಳನ್ನು ನೋಡಿ ದಂಗುಬಡಿದ ವೈದ್ಯರು…!

ರೋಪ್ ವೇ ಮೂಲಕ ಕೇವಲ 15 ನಿಮಿಷಗಳಲ್ಲಿ 4.2 ಕಿಮೀ ಚಲಿಸಬಹುದಾಗಿದ್ದು, 220ರಷ್ಟು ಟ್ರಾಲಿಗಳು 45 ಮೀಟರ್‌ಗಳಷ್ಟು ಎತ್ತದಲ್ಲಿ ಸಾಗಲಿವೆ. ಪ್ರತಿಯೊಂದು ಕೇಬಲ್ ಕಾರ್‌ 10 ಆಸನಗಳ ಸಾಮರ್ಥ್ಯ ಹೊಂದಲಿದೆ. 90-120 ಸೆಕೆಂಡ್‌ಗಳ ಅಂತರದಲ್ಲಿ ಈ ಕಾರುಗಳು ಚಲಿಸಲಿವೆ. ಈ ರೋಪ್‌ವೇ ಮೂಲಕ ಒಂದು ದಿಕ್ಕಿನಲ್ಲಿ ಗರಿಷ್ಠ 4000 ಮಂದಿ ಚಲಿಸಬಲ್ಲರು. ಕೇಂದ್ರ ಹಾಗೂ ರಾಜ್ಯಗಳು ಈ ಯೋಜನೆಯ ವೆಚ್ಚವನ್ನು 80:20ರ ಅನುಪಾತದಲ್ಲಿ ಹಂಚಿಕೊಳ್ಳಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...