ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಾಚಿಕೆಗೇಡಿ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಹಾಲಿನ ಟ್ಯಾಂಕ್ ಚಾಲಕ ಸಾವನ್ನಪ್ಪಿದ್ರೂ ಜನರು ಟ್ಯಾಂಕ್ ನಿಂದ ಹಾಲು ತೆಗೆದುಕೊಂಡು ಹೋಗ್ತಿದ್ದಾರೆ.
ಹಾಲಿನ ಟ್ಯಾಂಕ್ ಅಪಘಾತಕ್ಕೀಡಾಗಿದೆ. ಆದ್ರೆ ಚಾಲಕನ ಸ್ಥಿತಿ ಪರಿಶೀಲಿಸದೆ ಜನರು ಹಾಲು ತುಂಬಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ದುರದೃಷ್ಟಕರ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಚಾಲಕನ ಪ್ರಾಣ ಉಳಿಸುವ ಪ್ರಯತ್ನಕ್ಕಿಂತ ಹಾಲು ಸಂಗ್ರಹಿಸಲು ಜನರು ಹೆಚ್ಚು ಆಸಕ್ತಿ ವಹಿಸಿದ್ದನ್ನು ಕಂಡು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಗಾಜಿಯಾಬಾದ್‌ನ ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಟ್ರಕ್ ಮತ್ತು ಹಾಲಿನ ಟ್ಯಾಂಕ್ ವ್ಯಾನ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.